ಶಾಸಕ ಮುನಿರತ್ನ ಹನಿಟ್ರ್ಯಾಪ್ ಮಾಡುತ್ತಿದ್ದ ಖತರ್ನಾಕ್ ಪ್ಲ್ಯಾನ್ ಬಯಲು: ಬೆಡ್ ರೂಮೇ ಟಾರ್ಗೆಟ್

Krishnaveni K

ಮಂಗಳವಾರ, 3 ಡಿಸೆಂಬರ್ 2024 (11:08 IST)
ಬೆಂಗಳೂರು: ರಾಜ ರಾಜೇಶ್ವರಿ ನಗರ ಬಿಜೆಪಿ ಶಾಸಕ ಮುನಿರತ್ನ ನಾಯ್ಡು ಹನಿಟ್ರ್ಯಾಪ್ ಸಂಚು ಈಗ ಬಯಲಾಗಿದೆ. ಬಿಬಿಎಂಪಿ ಮಾಜಿ ಸದಸ್ಯೆಯ ಬೆಡ್ ರೂಂನಲ್ಲಿ ಕ್ಯಾಮರಾ ಇಟ್ಟಿದ್ದ ವಿಚಾರ ಬೆಳಕಿಗೆ ಬಂದಿದೆ.

ಮುನಿರತ್ನ  ವಿರುದ್ಧ ಜಾತಿನಂದನೆ, ಲೈಂಗಿಕ ಕಿರುಕುಳ, ಹನಿಟ್ರ್ಯಾಪ್, ಏಡ್ಸ್ ಸೋಂಕು ಇಂಜೆಕ್ಟ್ ಮಾಡುತ್ತಿದ್ದ ಪ್ರಕರಣಗಳಿವೆ. ಇದೀಗ ಬಿಬಿಎಂಪಿ ಮಾಜಿ ಸದಸ್ಯೆಯನ್ನೂ ಹನಿಟ್ರ್ಯಾಪ್ ಉದ್ದೇಶಕ್ಕಾಗಿ ಬಳಸಲು ಉದ್ದೇಶಿಸಿದ್ದರು ಎಂಬುದು ತಿಳಿದುಬಂದಿದೆ. ಇದಕ್ಕಾಗಿ ಸಂತ್ರಸ್ತ ಮಹಿಳೆಯ ಬೆಡ್ ರೂಂನಲ್ಲಿ ಕ್ಯಾಮರಾ ಇಡಲು ಯತ್ನಿಸಿದ್ದರಂತೆ.

ಈ ಬಗ್ಗೆ ಆಕೆಯ ಪತಿ ನಾರಾಯಣಸ್ವಾಮಿ ಎಸ್ಐಟಿಗೆ ದಾಖಲೆ ನೀಡಲು ಸಜ್ಜಾಗಿದ್ದಾರೆ. ಈ ಮೊದಲು ಮಾಜಿ ಕಾರ್ಪೋರೇಟರ್ ಮತ್ತು ಅವರ ಪತಿ ತಮ್ಮ ವಿರುದ್ಧ ಮುನಿರತ್ನ ಕೊಲೆಗೆ ಸುಪಾರಿ ನೀಡಿದ್ದರು ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಮುನಿರತ್ನ ವಿರುದ್ಧ ಮತ್ತೊಂದು ಆರೋಪ ಹೊರಿಸಿದ್ದಾರೆ.

ನಮ್ಮ ವಿರುದ್ಧ ಮುನಿರತ್ನ ಷಡ್ಯಂತ್ರ ನಡೆಸಿದ್ದಾರೆ. ಇದಕ್ಕೆ ಅವರ ವಿರುದ್ಧ ನಮ್ಮ ಬಳಿ ಅಡಿಯೋ, ವಿಡಿಯೋ ಸಾಕ್ಷ್ಯಗಳಿವೆ. ನನ್ನ ಮತ್ತು ಪತ್ನಿ ಖಾಸಗಿ ಕ್ಷಣವನ್ನು ವಿಡಿಯೋ ಮಾಡಲು ಯತ್ನಿಸಿದ್ದರು. ಇದೇ ಉದ್ದೇಶದಿಂದ ನಮ್ಮ ಬೆಡ್ ರೂಂನಲ್ಲಿ ಕ್ಯಾಮರಾ ಇಡಲು ಯತ್ನಿಸಿದ್ದರು ಎಂದು ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ