ಅದು ನನ್ನ ಮಗಳ ನಿರ್ಮಾಣದಲ್ಲಿ. ಕೋವಿಡ್ ಸಮಯದಲ್ಲಿ ಮನೆಯಲಿದ್ದಾಗ ತುಂಬಾ ವೆಬ್ ಸೀರಿಸ್ಗಳನ್ನು ನೋಡಿದೆ. ಒಂದಕ್ಕಿಂತ ಒಂದು ವಿಭಿನ್ನವಾಗಿತ್ತು. ಈ ತರಹನೂ ಮಾಡಬಹುದಲ್ಲ ಎಂಬ ಆಲೋಚನೆ ಬರುವಂತಹ ಕಥಾಹಂದರ ನೋಡಿ ಖುಷಿಯಾಯಿತು. ಈಗ ನನಗೂ ವೆಬ್ ಸೀರಿಸ್ನಲ್ಲಿ ನಟಿಸುವ ಮನಸ್ಸಾಗಿದೆ. ಸಿನಿಮಾಗಳ ಬಿಡುವಿನ ವೇಳೆಯಲ್ಲಿ ವೆಬ್ ಸೀರಿಸ್ ಮಾಡಬೇಕೆಂದಿದ್ದು, ಆ ಕುರಿತು ಚರ್ಚೆಯಾಗುತ್ತಿದೆ ಎಂದಿದ್ದಾರೆ.