ಕಾಲ್ನಡಿಗೆಯಲ್ಲೇ ಚಾಮುಂಡೇಶ್ವರಿ ಮೆಟ್ಟಿಲು ಹತ್ತಿದ ಶೋಭಾ ಕರಂದ್ಲಾಜೆ

ಶುಕ್ರವಾರ, 14 ಜುಲೈ 2017 (11:06 IST)
ಮೈಸೂರು: ಮಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಭೆ ಮುಗಿಸಿ ರಾಜ್ಯ ರಾಜಧಾನಿಗೆ ಬರುವ ಮೊದಲು ಸಂಸದೆ ಶೋಭಾ ಕರಂದ್ಲಾಜೆ ನಾಡದೇವತೆ ಚಾಮುಂಡೇಶ್ವರಿ ಬೆಟ್ಟ ಹತ್ತಿ ಪೂಜೆ ಸಲ್ಲಿಸಿದ್ದಾರೆ.

 
ಚಾಮುಂಡೇಶ್ವರಿ ದೇವಾಲಯಕ್ಕೆ ಕಾಲ್ನಡಿಗೆಯಲ್ಲೇ ಬೆಟ್ಟಹತ್ತಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ‘ರಾಜ್ಯದಲ್ಲಿ ಸ್ವಯಂ ನಿವೃತ್ತಿ ಪಡೆದ ಕೆಂಪಯ್ಯ  ಅವರಿಗೆ ಕೋಮು ಗಲಭೆ ನೀಡಲು ಅಧಿಕಾರ ನೀಡಲಾಗಿದೆ.

ಕೆ.ಜೆ ಜಾರ್ಜ್ ಅವಧಿಯಲ್ಲಿ ಪೊಲೀಸ್ ಇಲಾಖೆ ಅರ್ಧ ಸತ್ತು ಹೋಗಿತ್ತು. ಜಿ. ಪರಮೇಶ್ವರ್ ಮತ್ತು ಸಿಎಂ ಸಿದ್ಧರಾಮಯ್ಯ  ಅವಧಿಯಲ್ಲಿ ಸಂಪೂರ್ಣವಾಗಿ ಸತ್ತು ಹೋಗಿದೆ’ ಎಂದು ಅವರು ಕಿಡಿ ಕಾರಿದ್ದಾರೆ. ಇದರೊಂದಿಗೆ ಬಂಟ್ವಾಳದಲ್ಲಿ ನಡೆದ ಘಟನೆಗಳಿಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಮತ್ತೊಮ್ಮೆ ದೂರಿದ್ದಾರೆ.

ಇದನ್ನೂ ಓದಿ.. ಇನ್ನೊಬ್ಬ ನಟನ ಸಾವಿಗೂ ದಿಲೀಪ್ ಕಾರಣವೆಂದು ಆರೋಪ?!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ