ರಾಜ್ಯದ ಈ ಜಿಲ್ಲೆಯಲ್ಲಿ ಕೊರೊನಾ ವೈರಸ್ ಜನರನ್ನು ಅಕ್ಷರಶಃ ಬೆಚ್ಚಿಬೀಳಿಸಿದೆ.
ಧಾರವಾಡದಲ್ಲಿ ಜುಲೈ 15 ರಿಂದ ಲಾಕ್ ಆಗಲಿದೆ. ಬೆಳಿಗ್ಗೆ 10 ಗಂಟೆಯಿಂದ ಲಾಕ್ ಡೌನ್ ಶುರುವಾಗಲಿದ್ದು, ಜುಲೈ 24 ರಾತ್ರಿ 8 ಗಂಟೆವರೆಗೆ ಜಿಲ್ಲೆ ಸ್ತಬ್ಧವಾಗಲಿದೆ.
ಲಾಕ್ ಡೌನ್ ಉಲ್ಲಂಘಿಸಿ ಯಾರಾದರೂ ಅನಗತ್ಯವಾಗಿ ಮನೆಯಿಂದ ಹೊರಬಂದರೆ ಕೇಸ್ ದಾಖಲಿಸಲಾಗುತ್ತೆ. ಇನ್ನು ಲಾಕ್‌ಡೌನ್ ನಡುವೆ ಹೊರಗೆ ಬರುವ ವಾಹನಗಳನ್ನ ಪೊಲೀಸರು ಸೀಜ್ ಮಾಡಲಿದ್ದಾರೆ.
ಸಾರ್ವಜನಿಕ ಸಂಚಾರ ವ್ಯವಸ್ಥೆಯ ಬಸ್, ಆಟೋ, ಟ್ಯಾಕ್ಸಿ ಸೇವೆಯೂ ಬಂದ್ ಆಗಲಿದೆ. ವಾರಾಂತ್ಯದ ಮೋಜು ಮಸ್ತಿಯ ಪ್ರವಾಸಿ ತಾಣಗಳು ಬಂದ್ ಇರಲಿದ್ದು, ದೇಗುಲಗಳ ಬಾಗಿಲಗಳಿಗೂ ಬೀಗ ಬೀಳುತ್ತೆ.
ಆಸ್ಪತ್ರೆ ಸೇರಿದಂತೆ ಅಗತ್ಯ ಸೇವೆಗಳು ಎಂದಿನಂತೆ ಓಪನ್ ಆಗಿರಲಿದ್ದು, ಹೋಟೆಲ್‌ಗಳಲ್ಲಿ ಪಾರ್ಸಲ್ ವ್ಯವಸ್ಥೆ ಮಾತ್ರ ಇರುತ್ತೆ.