ಶಾಕಿಂಗ್... ಹೆಂಡತಿಗಿಂತ ಕುಡಿತನೇ ಮುಖ್ಯ ಎಂದ ಪತಿ! ಮುಂದೇನಾಯ್ತು?

ಸೋಮವಾರ, 31 ಜನವರಿ 2022 (12:22 IST)
ವಿಜಯಪುರ : ಪಾಪಿ ಗಂಡನೊಬ್ಬ ಹೆಂಡತಿಯನ್ನು ಕೊಲೆಗೈದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಚಾಂದಕವಠೆ ಗ್ರಾಮದಲ್ಲಿ ನಡೆದಿದೆ.
 
ಶೀಲವಂತಿ ಕನ್ನಾಳ ಕೊಲೆಯಾದ ಪತ್ನಿ. ಪತಿ ಗುರುಬಾಳ ಕನ್ನಾಳನು ಹರಿತವಾದ ಆಯುಧದಿಂದ ಪತ್ನಿಗೆ ತಿವಿದು ಹತ್ಯೆಗೈದಿದ್ದಾನೆ. ಗಂಡನ ಕುಡಿತದ ಕಾರಣ ಸಂಸಾರದಲ್ಲಿ ಬಿರುಕು ಉಂಟಾಗಿತ್ತು.

ಹೀಗಾಗಿ ಪತ್ನಿಯು ತನ್ನ ತವರು ಮನೆಯಲ್ಲಿದ್ದಳು. ಈ ಸಂದರ್ಭದಲ್ಲಿ ಅವನು ಹೆಂಡತಿಯ ಮನವೊಲಿಸಿ ತನ್ನ ಮನೆಗೆ ಕರೆದುಕೊಂಡು ಹೋಗಲು ಬಂದಿದ್ದನು. ಆಗ ಪತ್ನಿಯು ಕುಡಿತ ಬಿಟ್ಟರೆ ಮನೆಗೆ ಬರುವೆ ಅಂತ ಕರಾರು ಹಾಕಿದ್ದರು. 

ಘಟನೆಯು ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ