ರಷ್ಯಾ ವಿವಿಯೊಳಗೆ ಶೂಟೌಟ್ :-8 ಸಾವು

ಸೋಮವಾರ, 20 ಸೆಪ್ಟಂಬರ್ 2021 (22:28 IST)
ರಷ್ಯಾದ ಪೆರ್ಮ್ ನಗರದ ವಿಶ್ವವಿದ್ಯಾಲಯದಲ್ಲಿ ಸೋಮವಾರ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿ ನಡೆಸಿದ್ದು, ಕನಿಷ್ಠ ಎಂಟು ಜನರು ಸಾವಿಗೀಡಾಗಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಕಾನೂನು ಜಾರಿ ಅಧಿಕಾರಿಗಳು ತಿಳಿಸಿದ್ದಾರೆ
 
ಮಾಸ್ಕೋ ನಗರದ ಪೂರ್ವಕ್ಕೆ 1,300 ಕಿಮೀ (800 ಮೈಲಿ) ದೂರದಲ್ಲಿರುವ ಪೆರ್ಮ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಗುಂಡಿನ ದಾಳಿ ನಡೆದಿದೆ. ಬಳಿಕ ಬಂದೂಕುಧಾರಿಯನ್ನು ಬಂಧಿಸಲಾಗಿದೆ. ಬಂಧನದ ವೇಳೆ ಆತ ಪ್ರತಿರೋಧ ತೋರಿದ ಹಿನ್ನೆಲೆಯಲ್ಲಿ ಆತನಿಗೂ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 
ದಾಳಿಯಿಂದ ತಪ್ಪಿಸಿಕೊಳ್ಳಲು ವಿದ್ಯಾರ್ಥಿಗಳು ಮೊದಲ ಮಹಡಿಯ ಕಿಟಕಿಗಳಿಂದ ಜಿಗಿಯುವುದು, ಸುರಕ್ಷತೆಗೆ ಓಡುವ ದೃಶ್ಯ ಮಾಧ್ಯಮಗಳ ವಿಡಿಯೊ ತುಣುಕಿನಲ್ಲಿ ಕಂಡು ಬಂದಿದೆ
 
ಬಂದೂಕುಧಾರಿ ತಮ್ಮ ತರಗತಿಗೆ ಪ್ರವೇಶಿಸುವುದನ್ನು ತಡೆಯಲು ವಿದ್ಯಾರ್ಥಿಗಳು ಕುರ್ಚಿಗಳನ್ನೇ ಬ್ಯಾರಿಕೇಡ್‌ಗಳನ್ನಾಗಿ ಮಾಡಿಕೊಂಡಿದ್ದರು ಎಂದು ತನಿಖಾ ತಂಡ ಹೇಳಿದೆ.
 
ಬಂದೂಕುಧಾರಿಯನ್ನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ ಎಂದು ಪ್ರಮುಖ ಅಪರಾಧಗಳ ತನಿಖೆ ನಿರ್ವಹಿಸುವ ತನಿಖಾ ಸಮಿತಿ ಹೇಳಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ