ಆಝಾನ್ ಮಾಡುವಾಗ ಹನುಮಾನ್ ಚಾಲೀಸ್ ಹಾಕಿದ್ದಕ್ಕೆ ಹಲ್ಲೆ

Krishnaveni K

ಮಂಗಳವಾರ, 19 ಮಾರ್ಚ್ 2024 (13:47 IST)
Photo Courtesy: Twitter
ಬೆಂಗಳೂರು: ಮುಸ್ಲಿಮರ ಆಝಾನ್ ಮೊಳಗುವಾಗ ಅಂಗಡಿ ಮಾಲಿಕರೊಬ್ಬರು ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಕೆಲವು ಯುವಕರ ಗುಂಪು ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಹುಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರತ್ ಪೇಟೆಯಲ್ಲಿರುವ ಮೊಬೈಲ್ ಶಾಪ್ ಒಂದರಲ್ಲಿ ಜೋರಾಗಿ ಹನುಮಾನ್ ಚಾಲೀಸ್ ಹಾಕಲಾಗಿತ್ತು. ಇದೇ ವೇಳೆ ಮಸೀದಿಯಲ್ಲಿ ಆಝಾನ್ ಮೊಳಗುತ್ತಿತ್ತು. ಅಂಗಡಿಗೆ ಬಂದ ಯುವಕರ ಗುಂಪು ಹನುಮಾನ್ ಚಾಲೀಸಾ ಜೋರಾಗಿ ಹಾಕಬೇಡ ಎಂದಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದವಾಗಿದೆ.

ಅಂಗಡಿ ಮಾಲಿಕ ಮುಖೇಶ್ ನನ್ನು ಅಂಗಡಿಯಿಂದ ಹೊರಗೆಳೆದು ತಂದು ಹಲ್ಲೆ ನಡೆಸಲಾಗಿದೆ. ಘಟನೆ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಅದರಂತೆ ಎಲ್ಲಾ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಈಗ ರಾಜಕೀಯ ಸ್ವರೂಪ ಪಡೆಯುತ್ತಿದೆ.

ಬಿಜೆಪಿ ಇದನ್ನೇ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಅಸ್ತ್ರವಾಗಿ ಬಳಸಿದೆ. ಕಾಂಗ್ರೆಸ್ ಕೈಗೆ ಅಧಿಕಾರ ಸಿಕ್ಕು ರಾಜ್ಯ ತಾಲಿಬಾನ್ ಆಗುತ್ತಿದೆ. ಅಂಗಡಿ ಮಾಲಿಕ ಪೂಜೆ ಸಮಯದಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಗಲಾಟೆಯಾಗಿದೆ. ಮುಖೇಶ್ ದೂರು ನೀಡಿದರೂ ಪೊಲೀಸರು ಕ್ರಮ ಕೈಗೊಳ‍್ಳಲು ಹಿಂದೇಟು ಹಾಕಿದ್ದರು ಎಂದು ಕರ್ನಾಟಕ ಬಿಜೆಪಿ ಆರೋಪಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ