ನಶೆಯಲ್ಲಿ ಲವರ್ ಮುಂದೆ ಪಿಸ್ತೂಲ್ ತೋರಿಸಿ ಗುಂಡು ಹೊಡೆದುಕೊಂಡ ಪಾಗಲ್ ಪ್ರೇಮಿ

ಬುಧವಾರ, 1 ಜನವರಿ 2020 (15:09 IST)
ಪಾಗಲ್ ಪ್ರೇಮಿಯೊಬ್ಬ ಕುಡಿತದ ನಶೆಯಲ್ಲಿ ಮಾಡಬಾರದ ಕೆಲಸ ಮಾಡಿ ಗುಂಡು ಹೊಡೆದುಕೊಂಡಿದ್ದಾನೆ.

ತಡರಾತ್ರಿ ನಶೆಯಲ್ಲಿದ್ದ ಪ್ರಿಯಕರ ಸೋನು ಶರ್ಮಾ, ತನ್ನ ಪ್ರೇಯಸಿ ಮುಂದೆ ಪೋಸ್ ನೀಡೋಕೆ ಅಂತ ತನ್ನ ಬಳಿಯಿದ್ದ ಪಿಸ್ತೂಲ್ ಹೊರತೆಗೆದಿದ್ದಾನೆ.

ಪಿಸ್ತೂಲ್ ಹಿಡಿದು ಬಗೆ ಬಗೆಯಾಗಿ ಲವರ್ ಮುಂದೆ ಶೋ ಕೊಡಲು ಮುಂದಾದಾಗ ಗುಂಡು ಆಕಸ್ಮಿಕವಾಗಿ ಸೋನು ಶರ್ಮಾಗೆ ತಗುಲಿದೆ.

ಚಿಕಿತ್ಸೆ ದಾಖಲಾದ ಬಳಿಕ ನಡೆದ ಪೊಲೀಸ್ ವಿಚಾರಣೆಯಲ್ಲಿ ಸತ್ಯ ಬಹಿರಂಗವಾಗಿದ್ದು, ತನ್ನನ್ನು ಯಾರೋ ಕೊಲೆಗೆ ಯತ್ನ ನಡೆಸಿದ್ದರು ಅಂತ ಪ್ರಿಯಕರ ಸುಳ್ಳು ದೂರು ನೀಡಿದ್ದನು.

ಹೀಗಾಗಿ ಪ್ರಿಯಕರ ಹಾಗೂ ಆತನ ಗೆಳೆಯನ ವಿರುದ್ಧ ಕೇಸ್ ದಾಖಲಾಗಿದೆ. ದೆಹಲಿಯ ತಿಲಕ್ ನಗರದ ಪಾರ್ಕಿನಲ್ಲಿ ಈ ಘಟನೆ ನಡೆದಿದೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ