ನಡೆದಾಡುವ ದೇವರು ಸಿದ್ಧಗಂಗಾ ಡಾ.ಶಿವಕುಮಾರ್ ಸ್ವಾಮೀಜಿ ಲಿಂಗೈಕ್ಯ

ಸೋಮವಾರ, 21 ಜನವರಿ 2019 (14:12 IST)
ತುಮಕೂರು : ಕರ್ನಾಟಕ ರತ್ನ, ಶತಾಯುಷಿ ಸಿದ್ಧಗಂಗಾ ಮಠದ  ಡಾ.ಶಿವಕುಮಾರ್ ಸ್ವಾಮೀಜಿ  ಇಂದು ಹಳೆ ಮಠದಲ್ಲಿ ಕೊನೆಯುಸಿರೆಳೆದಿದ್ದಾರೆ.


ನಡೆದಾಡುವ ದೇವರೆಂದೇ ಪ್ರಸಿದ್ಧರಾದ ಡಾ.ಶಿವಕುಮಾರ್ ಸ್ವಾಮೀಜಿ ಅವರಿಗೆ 111 ವರ್ಷ ವಯಸ್ಸಾಗಿದ್ದು, ಇಂದು ಬೆಳಿಗ್ಗೆ 11.44ಕ್ಕೆ ಲಿಂಗೈಕ್ಯರಾಗಿದ್ದಾರೆ. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳಿಗೆ, ಅವರ ಇಚ್ಚೆಯಂತೆ ಹಲವು ದಿನಗಳಿಂದ ಹಳೆ ಮಠದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮಠದಲ್ಲಿಯೇ  ಕೊನೆಯುಸಿರೆಳೆದಿದ್ದಾರೆ.

 

ನಾಳೆ ಸಂಜೆ 3 ಗಂಟೆ ತನಕ ಭಕ್ತರಿಗೆ ಶ್ರೀಗಳ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗುವುದು. ಹಾಗೇ ನಾಳೆ ಸಂಜೆ 4.30ಕ್ಕೆ ಶ್ರೀಗಳ ಕ್ರಿಯಾಸಮಾಧಿ ಮಾಡಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ