ಸಿದ್ದಗಂಗಾ ಶ್ರೀಗಳ ಲಿಂಗೈಕ್ಯರಾದ ಹಿನ್ನಲೆ; ಬೆಂಗಳೂರಿನಿಂದ-ತುಮಕೂರಿನ ಹೆದ್ದಾರಿಯ ಟೋಲ್ ಉಚಿತ

ಮಂಗಳವಾರ, 22 ಜನವರಿ 2019 (12:34 IST)
ತುಮಕೂರು : ಸಿದ್ದಗಂಗಾ ಶ್ರೀಗಳ ಲಿಂಗೈಕ್ಯರಾದ ಹಿನ್ನಲೆಯಲ್ಲಿ ಶ್ರೀಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಬೆಂಗಳೂರಿನಿಂದ-ತುಮಕೂರಿನ ಹೆದ್ದಾರಿಯ ಟೋಲ್ ಗಳಲ್ಲಿ ವಾಹನಗಳಿಗೆ ಮಂಗಳವಾರ ಉಚಿತ ಪ್ರವೇಶ ಕಲ್ಪಿಸಿದೆ. 

ಇಂದು ಬೆಳಿಗ್ಗೆ 5ಗಂಟೆಯಿಂದ‌ ಮಧ್ಯರಾತ್ರಿ 12 ಗಂಟೆವರೆಗೂ ಟೋಲ್ ಎಲ್ಲಾ ಗೇಟ್ ತೆರೆದಿರುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸೂಚನೆ ನೀಡಿದೆ.

 

ಶ್ರೀಗಳ ದರ್ಶನಕ್ಕಾಗಿ ರಾಜ್ಯದ ನಾನಾ ಭಾಗಗಳಿಂದ ಭಕ್ತಾದಿಗಳು ಮಠದತ್ತ ಪ್ರಯಾಣ ಬೆಳೆಸಿದ್ದಾರೆ. ಹಾಗಾಗಿ ಎನ್ ಎಚ್‌ಎಐ ಬೆಂಗಳೂರಿನಿಂದ ಕ್ಯಾತ ಸಂದ್ರದವರೆಗೆ ಟೋಲ್‌ಗಳಲ್ಲಿ ವಾಹನ ಗಳಿಗೆ ಉಚಿತ ಪ್ರವೇಶ ನೀಡಿದೆ. 

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ