ನಾನು ನ್ಯಾಯಯುತವಾಗಿ ದುಡಿದರೂ ಆರೋಪಿಸಿದ ಸಿದ್ದರಾಮಯ್ಯ ತಾವು ಮಾಡಿದ್ದೇನು: ಜನಾರ್ಧನ ರೆಡ್ಡಿ

Sampriya

ಶನಿವಾರ, 17 ಆಗಸ್ಟ್ 2024 (16:19 IST)
Photo Courtesy X
ಬೆಂಗಳೂರು:  ಬೆಳಗ್ಗೆ ಎದ್ರೆ ನೈತಿಕತೆ, ಕಾನೂನು ಬಗ್ಗೆ ಮಾತನಾಡುವ ಸಿಎಂ ಸಿದ್ದರಾಮಯ್ಯ ಅವರಿಗೆ ಕಿಚ್ಚಿತ್ತು ನೈತಿಕತೆ ಬಗ್ಗೆ ಅರ್ಥ ಗೊತ್ತಿರುತ್ತಿದ್ದರೆ ಈಗಾಗಲೇ ರಾಜೀನಾಮೆ ನೀಡಿ, ಗೌರವ ಉಳಿಸಿಕೊಳ್ಳುತ್ತಿದ್ದರು ಎಂದು ಶಾಸಕ ಜನಾರ್ಧನ ರೆಡ್ಡಿ ವ್ಯಂಗ್ಯ ಮಾಡಿದರು.

ಬೆಂಗಳೂರಿನಲ್ಲಿ ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯರಿಗೆ ಪ್ರಾಷಿಕ್ಯೂಷನ್ ಅನುಮತಿ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಅಲ್ಪಸಂಖ್ಯಾತ, ದಲಿತ ನಾಯಕನ ಮುಖವಾಡ ಧರಿಸಿ ಜನರಿಗೆ ಮೋಸ ಮಾಡಿದ್ದಾರೆ. ನನಗೆ ಯಾವುದೇ ಆಸೆ, ಆಕಾಂಕ್ಷೆಗಳಿಲ್ಲ ಎಂದು ಬೊಗಳೆ ಬಿಡುವ ಅವರು 14ಸೈಟುಗಳಿಗೆ 63 ಕೋಟಿ ಕೊಟ್ರೆ ಬಿಟ್ಟು ಕೊಡ್ತೀನಿ ಎಂದು ಡೀಲ್ ಮಾಡುತ್ತಾರೆ ಎಂದು ಆಕ್ರೋಶ ಹೊರಹಾಕಿದರು.

ಸಿದ್ದರಾಮಯ್ಯ ಅವರು ಮುಖವಾಡ ಜನರಿಗೆ ಅರಿವಾಗಿದ್ದು, ಇದೀಗ ಅದನ್ನು ಮರೆಮಾಚಲು ಸಿಎಂ ಯತ್ನಿಸುತ್ತಿದ್ದಾರೆ. ಇದು ನಾಚಿಗೇಡಿನ ವಿಚಾರ.

ಈ ಹಿಂದೆ ಬಿಜೆಪಿ ನಾಯಕ ಬಿಎಸ್‌ ಯಡಿಯೂರಪ್ಪ ಹಾಗೂ ನನ್ನ ಮೇಲೆ ಲೋಕಾಯುಕ್ತದಲ್ಲಿ ನಮ್ಮ ಹೆಸರನ್ನು ಉಲ್ಲೇಖಿಸಿದಾಗ ಬಿಎಸ್‌ವೈ ಅವರು ಸಭೆ ಕರೆದು ನಾವು ನೈತಿಕ ಆಧಾರದ ಮೇಲೆ  ನಾವು ರಾಜೀನಾಮೆ ನೀಡುವಂತೆ ಹೇಳಿದರು. ಅದು ಇತಿಹಾಸ.

ಅಂದು ನನ್ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ, ನ್ಯಾಯಯುತವಾಗಿ ದುಡಿದ ನನ್ನ ಮೇಲೆ ಆನೇಕ ಆರೋಪಗಳನ್ನು ಮಾಡಿದ್ದರು. ನಾನು ನ್ಯಾಯಯುತವಾಗಿ ದುಡಿದ ಹಣವದು, ನಿಮ್ಮ ಹಾಗೇ ಅಕ್ರಮವಾಗಿ ಮಾಡಿಕೊಂಡದಲ್ಲ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಸಾರ್ವಜನಿಕ ಸಭೆಗಳಲ್ಲಿ ನನಗೆ ಯಾವುದೇ ಆಸೆ, ಆಕಾಂಕ್ಷೆಗಳಿಲ್ಲ. ಇಂದು ಕೂಡಾ ನಾನು ಬಾಡಿಗೆ ಮನೆಯಲ್ಲಿದ್ದೇನೆ, ಇದ್ದ ಎರಡು ಮನೆ ಮಾರಿ, ಸದ್ಯ ಒಂದು ಮನೆ ಕಟ್ಟುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಅದೇ 14 ಸೈಟುಗಳಿಗೆ  63ಕೋಟಿ ಹಣ ಕೊಟ್ರೇ ಬಿಟ್ಟು ಕೊಡ್ತೀನಿ ಅಂತಾ ಮುಖವಾಡ ಧರಿಸಿಕೊಂಡು ಬದುಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ