ಗವರ್ನರ್ ಬಳಸಿ ಬಿಜೆಪಿಯೇತರ ಸರ್ಕಾರಕ್ಕೆ ಕಿರುಕುಳ ಕೊಡುವುದೇ ಇವರ ಕೆಲಸ: ಮಲ್ಲಿಕಾರ್ಜುನ ಖರ್ಗೆ

Sampriya

ಶನಿವಾರ, 17 ಆಗಸ್ಟ್ 2024 (15:43 IST)
Photo Courtesy X
ಬೆಂಗಳೂರು: ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ ಅನುಮತಿ ನೀಡಿದ ಬೆನ್ನಲ್ಳೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದಾರೆ.

ಈ ಸಂಬಂಧ  ಮಲ್ಲಿಕಾರ್ಜುನ ಖರ್ಗೆಗೆ ಮಾಧ್ಯಮಗಳು ಪ್ರಶ್ನಿಸಿದಾಗ, ನಾನಿನ್ನೂ ನೋಟಿಸ್ ನೋಡಿಲ್ಲ. ನೋಟಿಸ್ ನಲ್ಲಿ ಏನು ಹೇಳಿದ್ದಾರೆ ಗೊತ್ತಿಲ್ಲ. ಈಗಷ್ಟೇ ದೆಹಲಿಯಿಂದ ಬಂದಿದ್ದೇನೆ. ನೋಟಿಸ್‌ನಲ್ಲಿರುವ ಕಾರಣವೇನು ಎಂದು ನೋಡಬೇಕಿದೆ ಎಂದರು.

ಕಳೆದ 7-8 ವರ್ಷಗಳಿಂದ ಬಿಜೆಪಿ ಸರ್ಕಾರ ಇತರೆ ಪಕ್ಷ ಆಡಳಿತದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳನ್ನು ಬೆದರಿಸುವುದು, ಕಿರುಕುಳ ನೀಡುವುದು ಮಾಡುತ್ತಲೇ ಇದೆ. ವಿಪಕ್ಷಗಳು ಸಿಎಂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಕಾರಣವಿಲ್ಲದೇ ನಾನು ರಾಜೀನಾಮೆ ಕೇಳಲೂ ಸಾಧ್ಯವಿಲ್ಲ ಎಂದಿದ್ದಾರೆ.

ಕಾನೂನು ತಜ್ಞರೊಂದಿಗೆ ಕೇಳಿಕೊಂಡು ಏನು ಮಾಡಬೇಕೋ ಮಾಡುವುದು ಒಳ್ಳೆಯದು. ಎಲ್ಲಾ ಕಡೆ ಬಿಜೆಪಿ ಗವರ್ನರ್ ಬಳಸಿಕೊಂಡು ಬಿಜೆಪಿಯೇತರ ಸರ್ಕಾರಗಳಿಗೆ ಕಿರುಕುಳ ನೀಡುತ್ತಲೇ ಬಂದಿದೆ. ಕರ್ನಾಟಕ, ತಮಿಳುನಾಡು, ದೆಹಲಿ ಹೀಗೆ ಎಲ್ಲಾ ಕಡೆ ಮಾಡುತ್ತಾ ಬಂದಿದೆ ಎಂದು ಆಕ್ರೋಶ ಹೊರಹಾಕಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ