ಸಿದ್ದರಾಮಯ್ಯ ಸಿಡಿಸಿದ್ರು ಹೊಸ ಬಾಂಬ್!

ಮಂಗಳವಾರ, 5 ಮಾರ್ಚ್ 2019 (18:50 IST)
ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೊಸ ಬಾಂಬ್ ಸಿಡಿಸಿದ್ದಾರೆ. ರಾಜಕೀಯ ಬೆಳವಣಿಗೆ ಹಾಗೂ ಅತೃಪ್ತ ಶಾಸಕರ ಕುರಿತು ನೀಡಿರುವ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅತೃಪ್ತ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ನಾಂಗೇಂದ್ರ ಎಲ್ಲೂ ಹೋಗಲ್ಲ. ಅವ್ರು ಪಕ್ಷದಲ್ಲೇ ಇರ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೊಸ ಬಾಂಬ್ ಹಾಕಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರದ ಕುಳಗೇರಿ ಕ್ರಾಸ್ ನಲ್ಲಿ ಮಾತನಾಡಿದ ಸಿದ್ದರಾಮಯ್ಯ, ಅತೃಪ್ತರೆಲ್ಲ ಪಕ್ಷದಲ್ಲೇ ಇರ್ತೀವಿ ಅಂತಾ ಅವ್ರು ಸ್ಟೇಟ್ಮೆಂಟ್ ಕೊಟ್ಟಿದ್ದಾರೆ. ಅವರು ಎಲ್ಲೂ ಹೋಗೊಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಮೋದಿಗೆ ರಾಜಕೀಯ ಬಿಟ್ಟು ಬೇರೆ ಗೊತ್ತಿಲ್ಲ, ಎಲ್ಲದ್ರಲ್ಲೂ ರಾಜಕೀಯ ಮಾಡ್ತಾರೆ.  ಯುವಕರು ಉದ್ಯೋಗ ಕೊಡಿ ಅಂದ್ರೆ ಟೀ ಮಾರಿ ಅಂತಾರೆ. ಮೋದಿ ಒಬ್ಬ ಪ್ರಧಾನಿಯಾಗಿ ಗಂಭಿರವಾಗಿ ಮಾತನಾಡೋದನ್ನ ಕಲಿಲಿಲ್ಲ ಎಂದರು ಚಾಟಿ ಬೀಸಿದರು.
ಮೋದಿಯಾಗಲೀ, ಅಮಿತ್ ಶಾ ಆಗಲೀ, ಬಿಜೆಪಿಯವ್ರು ಯಾರೇ ಆಗಲಿ ಸುಳ್ಳು ಹೇಳೋದು, ಬೇಜವಾಬ್ದಾರಿ ಹೇಳಿಕೆ ಕೊಡೋದ್ರಲ್ಲಿ ನಿಸ್ಸೀಮರು. ಯಾವುದನ್ನ ಮಾತನಾಡಬೇಕು, ಯಾವುದನ್ನ ಮಾತನಾಡಬಾರದು ಅನ್ನೋ ಪ್ರಜ್ಞೆಯೇ ಅವರಿಗಿಲ್ಲ ಎಂದ ಸಿದ್ದರಾಮಯ್ಯ, ಹುತಾತ್ಮರಾದ ಸೈನಿಕರ ಮೇಲೆ ರಾಜಕೀಯ ಮಾಡಬಾರದು.

ನಮಗೆಲ್ಲ ಸೈನಿಕರ ಮೇಲೆ ಗೌರವ ಇದೆ. ಅವ್ರೆಲ್ಲ ನೂರಾಮೂವತ್ತು ಕೋಟಿ ಜನರ ರಕ್ಷಣೆ ಮಾಡ್ತಾರೆ. ಹುತಾತ್ಮ ಸೈನಿಕರ ಸಾವಿನ ವಿಚಾರದಲ್ಲಿ ರಾಜಕೀಯ ಮಾಡೋದು ನೀಚತನದ ಪರಮಾವಧಿ ಎಂದರು ಕಿಡಿಕಾರಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ