ಕಾಂಗ್ರೆಸ್ ಗೆ ಕೈಕೊಟ್ಟ ಜಾಧವ್ ಗೆ ಬಿಜೆಪಿಗರು ಮಾಡ್ತಿರೋದೇನು?

ಮಂಗಳವಾರ, 5 ಮಾರ್ಚ್ 2019 (14:39 IST)
ಕಾಂಗ್ರೆಸ್ ಶಾಸಕಸ್ಥಾನಕ್ಕೆ ರಾಜೀನಾಮೆ ನೀಡಿರುವ ಉಮೇಶ ಜಾಧವ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಜಾಧವರಿಗೆ ಬಿಜೆಪಿ ಮುಖಂಡರು ಸ್ವಾಗತ ಕೋರಿ ಪೋಸ್ಟ್ ಮಾಡುತ್ತಿದ್ದಾರೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ಶಾಸಕ ಉಮೇಶ ಜಾಧವ್ ಬಿಜೆಪಿ ಸೇರೋ ವಿಚಾರ ಕ್ಷೇತ್ರದಲ್ಲಿ ಮಾತ್ರವಲ್ಲ ಜಿಲ್ಲೆಯಲ್ಲಿ ಚರ್ಚೆಗೆ ಕಾರಣವಾಗ್ತಿದೆ.

ಉಮೇಶ ಜಾದವ್ ಅವರಿಗೆ ಬಿಜೆಪಿಗೆ ಹಾರ್ದಿಕ ಸ್ವಾಗತ ಎಂದು ಪೋಸ್ಟ್ ಹಾಕಲಾಗುತ್ತಿದೆ. ಸಾಮಾಜಿಕಜಾಲತಾಣಗಳಲ್ಲಿ ಕಲಬುರ್ಗಿ ಜಿಲ್ಲೆಯ ಬಿಜೆಪಿ ಮುಖಂಡರಿಂದ ಪೇಸ್ಬುಕ್ ನಲ್ಲಿ ಪೋಸ್ಟ್ ಹಾಕಲಾಗುತ್ತಿದೆ.

ಕಲಬುರ್ಗಿ ಲೋಕಸಭೆ ಯುದ್ಧ ಪ್ರಾರಂಭ ಎಂದು ಪೋಸ್ಟ್ ಮಾಡಲಾಗಿದೆ. ನಾಳೆ ಕಲಬುರ್ಗಿಗೆ ಬರಲಿರುವ ಮೋದಿ ಸಮ್ಮುಖದಲ್ಲಿ ಬಿಜೆಪಿಗೆ ಜಾದವ್ ಸೇರಲಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ ಪೋಸ್ಟ್ ಗಳು. ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಲೋಕಸಭೆಯಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಜಾದವ್.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ