ಅತೃಪ್ತ ಮನಸ್ಸುಗಳ ಶಮನಕ್ಕೆ ಮುಂದಾದ ಸಿದ್ದರಾಮಯ್ಯ

ಮಂಗಳವಾರ, 25 ಅಕ್ಟೋಬರ್ 2016 (09:49 IST)
ಬೆಂಗಳೂರು: ಅಂತೂ ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯ ಐದು ವರ್ಷದ ಕೊನೆ ಘಳಿಗೆಯಲ್ಲಿ ಶಾಸಕರನ್ನು ಹಾಗೂ ಕೆಲವು ಕಾರ್ಯಕರ್ತರನ್ನು ನಿಗಮ ಹಾಗೂ ಮಂಡಳಿಗಳಿಗೆ ನೇಮಕ ಮಾಡುವ ಮೂಲಕ ಅತೃಪ್ತ ಮನಸ್ಸುಗಳನ್ನು ಸರಿ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ.
 
ಖಾಲಿ ಇರುವ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನಕ್ಕೆ 10 ರಿಂದ 15 ಶಾಕರನ್ನು, ನಾಲ್ವರನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ನೇಮಕ ಮಾಡುವ ಸಾಧ್ಯತೆಯಿದ್ದು, ನಿನ್ನೆಯಷ್ಟೇ ದೆಹಲಿಗೆ ತೆರಳಿ ರಾಹುಲ್ ಗಾಂಧಿಯವರ ಒಪ್ಪಿಗೆ ಪಡೆದುಕೊಂಡು ಬಂದಿದ್ದಾರೆ. ಆರೇಳು ತಿಂಗಳುಗಳಿಂದ ಖಾಲಿಯಿದ್ದ ಸ್ಥಾನಗಳಿಗೆ ದೀಪಾವಳಿ ಹಬ್ಬದೊಳಗೆ ನಾಮನಿರ್ದೇಶನವಾಗಲಿದೆ. 2018ರ ವಿಧಾನ ಸಭಾ ಚುನಾವಣೆ ದೃಷ್ಟಿಯಲ್ಲಿ ಇದು ಕಾಂಗ್ರೆಸ್‌ಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.
 
ಸಚಿವ ಸ್ಥಾನ ದೊರೆಯದ್ದರಿಂದ ಅಸಮಾಧಾನ ಹೊಂದಿರುವ ಶಾಸಕರನ್ನೂ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿ ಅವರನ್ನು ಸಮಾಧಾನ ಪಡಿಸಿ, ಚುನಾವಣೆಗೆ ಅಣಿಗೊಳಿಸುವ ತಂತ್ರ ಸಿದ್ದರಾಮಯ್ಯನವರದ್ದು. ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಳಿಸಲು ಸಿದ್ಧಪಡಿಸಿದ್ದ ಸಂಭವನೀಯರ ಪಟ್ಟಿಗೆ ಹೈಕಮಾಂಡ್ ಅಸ್ತು ಎಂದಿದೆ. ನೇಮಕಗೊಳ್ಳದ ಅನೇಕ ಆಕಾಂಕ್ಷಿಗಳಿಗೆ ಅಸಮಾಧಾನ ಆಗುವ ಸಾಧ್ಯತೆ ಇರುವುದರಿಂದ ಪಟ್ಟಿಯನ್ನು ಇನ್ನೂ ಅಧಿಕೃತವಾಗಿ ಬಿಡುಗಡೆ ಮಾಡಿಲ್ಲ. ದೀಪಾವಳಿ ಮುನ್ನ ಸಂಬಂಧಿಸಿದ ಶಾಸಕ, ಕಾರ್ಯಕರ್ತರಿಗೆ ವೈಯಕ್ತಿಕವಾಗಿ ಆದೇಶ ಪತ್ರ ನೀಡುವ ಚಿಂತನೆ ರಾಜ್ಯ ಕಾಂಗ್ರೆಸ್ ಪಕ್ಷದ್ದು ಎನ್ನಲಾಗಿದೆ.
 
ಸಂಭವನೀಯರ ಶಾಸಕರ ಪಟ್ಟಿ
ಮಾಲಿಕಯ್ಯ ಗುತ್ತೇದಾರ, ಶಿವಾನಂದ ಪಾಟೀಲ, ಎಂ.ಟಿ.ಬಿ. ನಾಗರಾಜ್, ಸಿ.ಪಿ. ಯೋಗೇಶ್ವರ, ಆರ್.ವಿ. ದೇವರಾಜ್, ರಾಜು ಆಲಗೂರು, ಡಿ.ಜೆ. ಶಾಂತನಗೌಡ, ರಾಜಾ ವೆಂಕಟಪ್ಪನಾಯಕ, ಜೆ.ಎಸ್. ಪಾಟೀಲ, ಬಿ.ಆರ್. ಯಾವಗಲ್, ಫೀರೋಜ್ ಶೇಠ್, ರಹೀಂಖಾನ್, ಕೆ. ವೆಂಕಟೇಶ, ಎಂ.ಪಿ. ನರೇಂದ್ರಸ್ವಾಮಿ, ವಸಂತ ಬಂಗೇರ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ