ಸಿದ್ದರಾಮಯ್ಯ ಒಬ್ಬ ಕುಡುಕ-ಕೆಎಸ್ ಈಶ್ವರಪ್ಪ ಗರಂ

ಬುಧವಾರ, 1 ಡಿಸೆಂಬರ್ 2021 (21:04 IST)
ಸಿದ್ದರಾಮಯ್ಯ ಒಬ್ಬ ಮಹಾನ್ ಮೋಸಗಾರ. ಸಿದ್ದರಾಮಯ್ಯ ರಕ್ತದ ಕಣಕಣದಲ್ಲಿ ಮೋಸ ಇದೆ. ಮೊದಲು ಜೆಡಿಎಸ್ಗೆ ಮೋಸ ಮಾಡಿದ್ದಾರೆ. ಶ್ರೀನಿವಾಸ್ ಪ್ರಸಾದಗೆ ಮೋಸ ಮಾಡಿದ್ದಾರೆ. ಈಗ ಕಾಂಗ್ರೆಸ್‌ಗೂ ಮೋಸ ಮಾಡಲು ರೆಡಿ ಆಗಿದ್ದಾರೆ.ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಒಬ್ಬ ಭಯೋತ್ಪಾದಕ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ (ಸಿದ್ದರಾಮಯ್ಯ) ಹೇಳಿಕೆಗೆ ಸಚಿವ ಕೆಎಸ್‌ಎಸ್ ಈಶ್ವರಪ್ಪ (ಕೆಎಸ್ ಈಶ್ವರಪ್ಪ) ಗರಂ ಆಗಿದ್ದಾರೆ. ಕಲಬುರಗಿ ಕುರಿತು ಹೇಳಿಕೆ ನೀಡಿರುವ ಈಶ್ವರಪ್ಪ, ಸಿದ್ದರಾಮಯ್ಯ ಒಬ್ಬ ಕುಡುಕ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಯಾವಾಗ ಕುಡಿತಾರೋ ಯಾವಾಗ ಕುಡಿಯಲ್ವೋ ಗೊತ್ತಿಲ್ಲ. ಅವರು ಹೆಂಡ ಕುಡಿದಾಗ ಒಂದು ಮಾತಾಡ್ತಾರೆ. ಹೆಂಡ ಕುಡಿದೇ ಇದ್ದಾಗ ಒಂದು ಮಾತಾಡ್ತಾರೆ ಅಂತ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.
 
ಸಿದ್ದರಾಮಯ್ಯ ಒಬ್ಬ ಮಹಾನ್ ಮೋಸಗಾರ. ಸಿದ್ದರಾಮಯ್ಯ ರಕ್ತದ ಕಣಕಣದಲ್ಲಿ ಮೋಸ ಇದೆ. ಮೊದಲು ಜೆಡಿಎಸ್ ಗೆ ಮೋಸ ಮಾಡಿದ್ದಾರೆ. ಶ್ರೀನಿವಾಸ್ ಪ್ರಸಾದಗೆ ಮೋಸ ಮಾಡಿದ್ದಾರೆ. ಈಗ ಕಾಂಗ್ರೆಸ್‌ಗೂ ಮೋಸ ಮಾಡಲು ರೆಡಿ ಆಗಿದ್ದಾರೆ. ನಳಿನ್ ಕುಮಾರ್ ಕಟೀಲ್ ಒಬ್ಬ ದೇಶಭಕ್ತ. ಇಂತಹ ಮೋಸಗಾರ ನಮ್ಮ ಅಧ್ಯಕ್ಷರ ಬಗ್ಗೆ ಏನು ಮಾತಾಡ್ತಾರೆ? ಎಂದು ಪ್ರಶ್ನಿಸಿದ ಈಶ್ವರಪ್ಪ, ಜಮೀರ್ ಅಹ್ಮದ್ ಅವರನ್ನು ಸಿದ್ದರಾಮಯ್ಯ ಹೊಗಳುತ್ತಾರೆ. ನಳಿನ್ ಕುಮಾರ್ ಕಟೀಲ್ ರಂತಹ ದೇಶ ಭಕ್ತರನ್ನ ಭಯೋತ್ಪಾದಕ ಅಂತಾರೆ ಅಂತ ಗರಂ ಆಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ