ಮುಖ್ಯಮಂತ್ರಿಯಾದವರು ಕಾವೇರಿ ನಿವಾಸಕ್ಕೆ ಬರೋದು ವಾಡಿಕೆ. ಆದರೆ ಸಮ್ಮಿಶ್ರ ಸರಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದರೂ ಸಿದ್ದರಾಮಯ್ಯ ಕಾವೇರಿ ನಿವಾಸ ಬಿಡೋಕೆ ಮುಂದಾಗ್ತಿಲ್ಲ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಡಾಲರ್ಸ್ ಕಾಲೋನಿ ಮನೆಯಿಂದಲೇ ಕಾರ್ಯಚಟುವಟಿಕೆ ಮಾಡುತ್ತಿದ್ದಾರೆ. ಹೀಗಾಗಿ ಸಿಎಂ ಆದಾಗಿನಿಂದಲೂ ಕಾವೇರಿ ನಿವಾಸದಲ್ಲೇ ವಾಸ್ತವ್ಯ ಇರೋ ಸಿದ್ದರಾಮಯ್ಯ, ಕಾವೇರಿ ನಿವಾಸವನ್ನು ತಮಗೆ ಕೊಡಬೇಕು ಅಂತ ಮನವಿ ಮಾಡಿದ್ದಾರೆ.
ಮೈತ್ರಿ ಸರಕಾರದಲ್ಲಿ ಸಿದ್ದರಾಮಯ್ಯಗೆ ಯಾವುದೇ ಅಧಿಕಾರ ಇರಲಿಲ್ಲ. ಆಗಲೂ ಕಾವೇರಿಯಲ್ಲೇ ಇದ್ದರು. ಈಗ ವಿಪಕ್ಷ ನಾಯಕರಾಗಿರೋ ಕಾರಣ ಸಿದ್ದರಾಮಯ್ಯರಿಗೆ ಸರಕಾರವೇ ಮನೆ ಹಂಚಿಕೆ ಮಾಡಬೇಕು.
ಕಾವೇರಿ ನಿವಾಸದಲ್ಲೇ ಸಿದ್ದರಾಮಯ್ಯ ವಾಸ್ತವ್ಯ ಮುಂದುವರಿಯುತ್ತದೆಯೋ ಅಥವಾ ಬೇರೆ ಮನೆಯನ್ನು ಹಂಚಿಕೆ ಮಾಡಲಾಗುತ್ತದೆಯೋ ಅನ್ನೋದು ಶೀಘ್ರವೇ ಗೊತ್ತಾಗಲಿದೆ.