ಗೋದ್ರಾ ದುರಂತದಲ್ಲಿ ಸತ್ರು, ಕುಂಬಮೇಳದಲ್ಲಿ ಸತ್ರು ಮೋದಿ ರಾಜೀನಾಮೆ ಕೇಳಿದ್ವಾ: ಸಿದ್ದರಾಮಯ್ಯ
ಚಿನ್ನಸ್ವಾಮಿ ಮೈದಾನದ ಹೊರಗೆ ನಡೆದ ಪ್ರಕರಣದಲ್ಲಿ 11 ಜನ ಸಾವನ್ನಪ್ಪಿದ್ದಕ್ಕೆ ಸಿಎಂ, ಡಿಸಿಎಂ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಬಿಜೆಪಿ ಇಂದು ಪ್ರತಿಭಟನೆ ಹಮ್ಮಿಕೊಂಡಿದೆ. ಇದಕ್ಕೆ ಇಂದು ಸಿಎಂ ಮಾಧ್ಯಮಗಳ ಮುಂದೆ ತಿರುಗೇಟು ನೀಡಿದ್ದಾರೆ.
ಅಲಹಾಬಾದ್ ನಲ್ಲಿ ಒಂದು ಘಟನೆಯಾಯ್ತು, ಗೋದ್ರಾ ದುರಂತದಲ್ಲಿ ಹಲವರು ಸತ್ರು. ಕುಂಬಮೇಳದಲ್ಲಿ ಕಾಲ್ತುಳಿತದಿಂದ ಹಲವರು ಸತ್ರು. ಆಗ ನಾವು ಏನಾರೂ ರಾಜೀನಾಮೆ ಕೇಳಿದ್ವಾ? ಅಥವಾ ಇವರೇನಾದ್ರೂ ಕೇಳಿದ್ರಾ? ಮತ್ತೆ ಈಗ ಯಾವ ನೈತಿಕತೆ ಇಟ್ಟುಕೊಂಡು ನಮ್ಮ ರಾಜೀನಾಮೆ ಕೇಳ್ತಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.
ನೋಡಿ ಇದನ್ನು ನಾವು ಒಂದು ಎಕ್ಸ್ ಕ್ಯೂಸ್ ಎಂದು ಹೇಳುತ್ತಿಲ್ಲ. ಆದರೆ ಅವರ ಕಾಲದಲ್ಲೂ ಹಲವು ದುರಂತಗಳಾಗಿವೆ. ರಾಜೀನಾಮೆ ಕೇಳುವುದಕ್ಕೂ ಒಂದು ಬೆಲೆ ಬೇಡ್ವಾ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.