ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.40 ಗುತ್ತಿಗೆದಾರರಿಂದ ಕಮಿಷನ್ ಪಡೆಯಲಾಗುತ್ತಿತ್ತು ಎಂದು ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿತ್ತು. ಆ ವಿಚಾರ ಈಗ ಸದ್ದು ಮಾಡುತ್ತಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯ, ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಕೊಟ್ಟ ದೂರಿನ ಆಧಾರದಲ್ಲಿ ನಾವು ತನಿಖೆಗೆ ಸೂಚಿಸಿದ್ದೆವು. ಆದರೆ ಆರೋಪ ಸಾಬೀತಾಗಲಿಲ್ಲ. ಕೆಲವೊಮ್ಮೆ ಸಾಕ್ಷ್ಯಾಧಾರಗಳ ಕೊರತೆಯಿಂದ ಕೊಲೆ ಆರೋಪಿಗಳ ಖುಲಾಸೆ ಆಗುತ್ತದೆ. ಹಾಗಂತ ಕೊಲೆಯೇ ಆಗಿಲ್ಲ ಎಂದು ಅರ್ಥ ಅಲ್ಲ. ಕೊಲೆ ನಡೆದಿರುತ್ತದೆ. ಆದರೆ ಸಾಕ್ಷ್ಯಗಳು ಸಾಕ್ಷ್ಯ ಹೇಳಿರುವುದಿಲ್ಲ ಅಷ್ಟೇ. ಇದೂ ಹಾಗೆಯೇ ಎಂದು ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು.
ಮುಡಾ ಕೇಸ್ ನಲ್ಲೂ ಸಿದ್ದರಾಮಯ್ಯ ನನ್ನ ಪಾತ್ರವಿಲ್ಲ, ನಾನು ಅಕ್ರಮ ಮಾಡಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ಸಾಮಾಜಿಕ ಕಾರ್ಯಕರ್ತರ ಸ್ನೇಹಮಯಿ ಕೃಷ್ಣ ಸಿಎಂ ಪತ್ನಿಗೆ ಅಕ್ರಮವಾಗಿ 14 ಸೈಟು ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣ ತನಿಖಾ ಹಂತದಲ್ಲಿ ಈ ಕೇಸ್ ಕೂಡಾ ಹಾಗೆಯೇ ಸಾಕ್ಷ್ಯವಿಲ್ಲ ಎಂದ ಮಾತ್ರಕ್ಕೆ ಅಪರಾಧವೇ ಆಗಿಲ್ಲ ಎಂದು ಅರ್ಥ ಅಲ್ಲವಲ್ಲ ಎಂದು ನೆಟ್ಟಿಗರು ಸಿದ್ದರಾಮಯ್ಯ ಮಾತನ್ನು ಅವರಿಗೇ ತಿರುಗಿಸಿಕೊಟ್ಟಿದ್ದಾರೆ.