ಬಿಜೆಪಿ ಸಚಿವನಿಗೆ ಆರ್ಥಿಕತೆ ಬಗ್ಗೆ ಏನ್ ಗೊತ್ತು ಎಂದ ಸಿದ್ದರಾಮಯ್ಯ

ಬುಧವಾರ, 3 ಜೂನ್ 2020 (17:12 IST)
ಬಿಜೆಪಿ ಮುಖಂಡ, ಸಚಿವ ವಿ.ಸೋಮಣ್ಣ ವಿರುದ್ಧ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಟೀಕೆ ಮಾಡಿದ್ದಾರೆ.

ವಿ.ಸೋಮಣ್ಣ ಆರ್ಥಿಕ ತಜ್ಞನೇ ಎಂದು ಪ್ರಶ್ನಿಸುವ ಮೂಲಕ ಭರ್ಜರಿಯಾಗಿ ಟಾಂಗ್ ನೀಡಿದ್ದಾರೆ. ಸಿಎಂ ಆಗಿದ್ದ ಸಿದ್ದರಾಮಯ್ಯರ ಅವಧಿಯಲ್ಲೇ ರಾಜ್ಯದ ಆರ್ಥಿಕತೆ ಹಾಳಾಗಿತ್ತು ಎಂದು ಸೋಮಣ್ಣ ದೂರಿದ್ದರು.

ಇದಕ್ಕೆ ಗರಂ ಆಗಿಯೇ ಸಿದ್ದರಾಮಯ್ಯ ಉತ್ತರ ಕೊಟ್ಟಿದ್ದಾರೆ. ರಾಜ್ಯದ ಆರ್ಥಿಕತೆ ಈಗ ಹಾಳಾಗಿದೆ. ಸರಕಾರಿ ನೌಕರರಿಗೆ ಸಂಬಳ ಕೊಡಲು ಖಜಾನೆಯಲ್ಲಿ ಹಣವಿಲ್ಲ ಎಂದು ಕುಟುಕಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ