ಬೆಂಗಳೂರು: ಕನ್ನಡದ ಖ್ಯಾತ ಬರಹಗಾರ ಎಸ್ಎಲ್ ಭೈರಪ್ಪನವರ ಜೊತೆಗಿನ ಸ್ನೇಹದ ಬಗ್ಗೆ ಸಿಎಂ ಸಿದ್ದರಾಮಯ್ಯ ಅಚ್ಚರಿಯ ಮಾತುಗಳನ್ನು ಆಡಿದ್ದಾರೆ.
ನಿನ್ನೆ ಇಹಲೋಕ ತ್ಯಜಿಸಿದ್ದ ಎಸ್ಎಲ್ ಭೈರಪ್ಪನವರ ಅಂತಿಮ ದರ್ಶನ ಪಡೆದ ಬಳಿಕ ಸಿಎಂ ಸಿದ್ದರಾಮಯ್ಯ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಈ ವೇಳೆ ಭೈರಪ್ಪನವರ ಜೊತೆಗಿನ ಒಡನಾಟದ ಬಗ್ಗೆ ಹೇಳಿದ್ದಾರೆ.
ಎಸ್ಎಲ್ ಭೈರಪ್ಪನವರದ್ದು ಬಲಪಂಥೀಯ ವಿಚಾರಧಾರೆ. ಹೀಗಾಗಿ ಸಿದ್ದರಾಮಯ್ಯ ಮಾತುಗಳು ಮಹತ್ವದ್ದಾಗಿದೆ. ಸಾಹಿತ್ಯ ಬೇರೆ, ಸ್ನೇಹ ಬೇರೆ. ನಮ್ಮ ದೃಷ್ಟಿಕೋನಗಳು ಬೇರೆ. ಹಾಗೆಂದು ನನ್ನ ದೃಷ್ಟಿಕೋನವೂ ಅವರ ದೃಷ್ಟಿಕೋನವೂ ಒಂದೇ ಆಗಿರಬೇಕೆಂದೇನಿಲ್ಲ. ಅವರ ಅಭಿಮಾನಿ ಆಗಬೇಕೆಂದಿಲ್ಲ, ಅಥವಾ ಆಗಬಾರದು ಎಂದೂ ಇಲ್ಲ ಎಂದಿದ್ದಾರೆ.
ಭೈರಪ್ಪನವರ ಸಾಹಿತ್ಯ ಸಾಧನೆಯನ್ನು ಹೊಗಳಿದ ಸಿದ್ದರಾಮಯ್ಯ ಅವರ ಸಾಧನೆಗೆ ಅವರಿಗೆ ಜ್ಞಾನ ಪೀಠ ಪ್ರಶಸ್ತಿ ಸಿಗಬೇಕಿತ್ತು. ಆದರೆ ಅವರು ಪ್ರಶಸ್ತಿ ಬಯಸದೇ ಇದ್ದವರು ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.