ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ರಣತಂತ್ರ ರೂಪಿಸಿದ ಸಿದ್ದರಾಮಯ್ಯ

ಭಾನುವಾರ, 10 ನವೆಂಬರ್ 2019 (10:06 IST)
ಬೆಂಗಳೂರು : ಸಿದ್ದರಾಮಯ್ಯ ಅವರು ಸಾಮೂಹಿಕ ನಾಯಕತ್ವದ ಮೂಲಕ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ರಣತಂತ್ರ ರೂಪಿಸಿದ್ದಾರೆ.




ಉಪಚುನಾವಣೆಯ ಹಿನ್ನಲೆಯಲ್ಲಿ ಮುಂಚೂಣಿ ನಾಯಕರ ಜಂಟಿ ಪ್ರಚಾರಕ್ಕೆ ಪ್ಲ್ಯಾನ್ ಮಾಡಿರುವ ಸಿದ್ದರಾಮಯ್ಯ ತಮ್ಮ ಜತೆ ಮುಂಚೂಣಿ ನಾಯಕರೂ ಪ್ರಚಾರಕ್ಕೆ  ಬರಬೇಕು. ಕ್ಷೇತ್ರವಾರು ಚುನಾವಣಾ ಉಸ್ತುವಾರಿಯನ್ನು ಹೊರಬೇಕು ಎಂದು ತಿಳಿಸಿದ್ದಾರೆ.


ಜಂಟಿ ಪ್ರಚಾರದ ಮೂಲಕ ಎಲ್ಲರಿಗೂ ಚುನಾವಣಾ ಜವಬ್ದಾರಿ ನೀಡಲು ಮುಂದಾದ ಸಿದ್ದರಾಮಯ್ಯ, ಜಂಟಿ ಪ್ರಚಾರಕ್ಕೆ ತಂಡ ರಚಿಸಲು ತೀರ್ಮಾನಿಸಿದ್ದಾರೆ. ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಕೃಷ್ಣಬೈರೇಗೌಡ, ಡಾ.ಜಿ.ಪರಮೇಶ್ವರ್, ಡಿಕೆ ಶಿವಕುಮಾರ್, ಎಸ್.ಆರ್.ಪಾಟೀಲ್, ಸೇರಿದಂತೆ ಪಕ್ಷದ ಪ್ರಮುಖರ ತಂಡ ರಚಿಸಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ