ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಹೆಚ್ಚಿನವರು ಕೀಲುನೋವು ಸಮಸ್ಯೆಯಿಂದ ಬಳಲುತ್ತಾರೆ. ಈ ಕೀಲುನೋವು ಸಮಸ್ಯೆ ಇರುವವರು ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸದಿರುವುದೇ ಉತ್ತಮ.
*ಕೀಲುನೋವು ಸಮಸ್ಯೆ ಇರುವವರು ಪ್ಯಾಕೆಟ್ ಗಳಲ್ಲಿ ದೊರೆಯುವ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಇವುಗಳಿಂದ ತೂಕ ಹೆಚ್ಚಾಗಿ ಇದು ಜಾಯಿಂಟ್ ಮೇಲೆ ಒತ್ತಡವನ್ನುಂಟುಮಾಡುತ್ತವೆ.
*ಕೀಲು ನೋವು ಸಮಸ್ಯೆಯಿಂದ ಬಳಲುತ್ತಿರುವವರು ಕರಿದ ಮಾಂಸದ ಆಹಾರಗಳನ್ನು ತಿನ್ನಬಾರದು. ಇದು ಇನ್ಪುಮೇಶನ್ ನ್ನು ಹೆಚ್ಚಿಸುವುದರಿಂದ ಇದು ಕೀಲುನೋವು ಸಮಸ್ಯೆ ಇರುವವರ ಮೇಲೆ ಕೆಟ್ಟಪರಿಣಾಮ ಬೀರುತ್ತದೆ.
*ಕೀಲುನೋವಿನಿಂದ ಬಳಲುತ್ತಿರುವವರು ಟೊಮೆಟೊ ಹೆಚ್ಚು ಸೇವಿಸಬಾರದು. ಇದರಲ್ಲಿ ಯೂರಿಕ್ ಆಸಿಡ್ ಇರುವುದರಿಂದ ಇದು ನೋವು ಹೆಚ್ಚಾಗುವಂತೆ ಮಾಡುತ್ತದೆ.
*ಆಲ್ಕೋಹಾಲ್ ನಲ್ಲಿ ಯೂರಿಕ್ ಆಸಿಡ್ ಇರುವುದರಿಂದ ಇದು ನೋವಿಗೆ ಕಾರಣವಾಗುವುದರಿಂದ ಕೀಲು ನೋವು ಇರುವವರು ಆಲ್ಕೋಹಾಲ್ ಸೇವನೆಯಿಂದ ದೂರವಿರಿ.