ಸುಧಾರಿಸಿಕೊಂಡು ಬಿಜೆಪಿ ಸರ್ಕಾರ ಕಿತ್ತೊಗೆಯಿರಿ ಅಂದ ಸಿದ್ದರಾಮಯ್ಯ
ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿವಿಯಲ್ಲಿ ಎರಡು ಗುಂಪಿನ ನಡುವೆ ಘರ್ಷಣೆ ನಡೆದಿದೆ..ಘಟನೆಯಲ್ಲಿ 6 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎನ್ನಲಾಗ್ತಿದೆ..ವಿವಿಯ ಹಾಸ್ಟೆಲ್ನಲ್ಲಿ ಮಾಂಸ ಸೇವಿಸದಂತೆ ABVP ತಾಕೀತು ಮಾಡಿತ್ತು..ಆದ್ರೆ ABVP ಹಿಂಸಾತ್ಮಕ ವಾತಾವರಣ ಸೃಷ್ಠಿಸಿದೆ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ..ರಾಮನವಮಿ ಪೂಜೆಗೆ ಎಡಪಂಥೀಯರ ಅಡ್ಡಿ ಎಂದು ABVP ಪ್ರತ್ಯಾರೋಪ ಮಾಡಿ, ಎರಡೂ ಗುಂಪುಗಳಿಂದ ಕಲ್ಲುತೂರಾಟ ನಡೆದಿದೆ..ಈ ಹಿನ್ನೆಲೆ JNU ಕ್ಯಾಂಪಸ್ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಯ್ತು.. ಗುಂಪು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಗಳ ಗುರುತು ಪತ್ತೆ ಹಚ್ಚಲಾಗಿದ್ದು, FIR ದಾಖಲು ಮಾಡಲಾಗಿದೆ..