ಜೆಡಿಎಸ್ ಬಗ್ಗೆ ಸ್ಫೋಟಕ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ

ಶುಕ್ರವಾರ, 28 ಜೂನ್ 2019 (16:16 IST)
ಈ ಹಿಂದೆ ಜೆಡಿಎಸ್ ನಲ್ಲಿದ್ದಾಗ ಅಹಿಂದ ಸಂಘಟನೆ ಮಾಡಿದ್ದರಿಂದಲೇ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ನಿಂದ ಹೊರಕ್ಕೆ ಹಾಕಲಾಗಿತ್ತಂತೆ. ಹೀಗಂತ ಸಿದ್ದರಾಮಯ್ಯ ಬಾಂಬ್ ಸಿಡಿಸಿದ್ದಾರೆ.

ಶಾಸಕ ಅಮರೇಗೌಡ ಬಯ್ಯಾಪುರ ಅವರು ಜೆಡಿಎಸ್ ನಿಂದ ಸಿದ್ದರಾಮಯ್ಯರನ್ನು ಯಾಕೆ ಹೊರಕ್ಕೆ ಹಾಕಲಾಯಿತು ಎಂಬುದರ ಬಗ್ಗೆ ಹೇಳಿಕೆ ನೀಡಿದ್ದರು. ಅಹಿಂದ ಸಂಘಟನೆ ಮಾಡಿದ್ದರಿಂದಲೇ ಜೆಡಿಎಸ್ ನಿಂದ ಸಿದ್ದರಾಮಯ್ಯ ಹೊರಬಿದ್ದಿದ್ದರು ಎಂದಿದ್ದರು. ಈ ಮಾತಿಗೆ ಸಿದ್ದರಾಮಯ್ಯ ಕೂಡ ಹೌದು, ಅಮರೇಗೌಡ ಹೇಳಿರುವುದು ಸತ್ಯ ಅಂತ ಹೇಳಿದ್ದಾರೆ.

ಆದರೆ ರಾಜ್ಯದಲ್ಲಿ ಈಗ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರವಿದೆ. ನಾನು ಸಿಎಲ್ ಪಿ ಅಧ್ಯಕ್ಷ ಹಾಗೂ ಮಾಜಿ ಸಿಎಂ. ಹೀಗಾಗಿ ಕಾಂಗ್ರೆಸ್ ಪಕ್ಷದ ವತಿಯಿಂದಲೇ ಅಹಿಂದ ಸಂಘಟನೆ ಮಾಡುತ್ತೇನೆ. ಅಹಿಂದ ಸಂಘಟನೆ ಪ್ರತ್ಯೇಕವಾಗಿ ಇನ್ಮುಂದೆ ಮಾಡೋದಿಲ್ಲ. ಹೀಗಂತ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಆಪರೇಷನ್ ಕಮಲ ಸಾಧ್ಯವಿಲ್ಲ. ಕಮಲ ಪಾಳೆಯದ ಶಾಸಕರಿಗೆ ಆಪರೇಷನ್ ಮಾಡಬೇಕಿದೆ ಎಂದೂ ಸಿದ್ದರಾಮಯ್ಯ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದ್ರು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ