ಕ್ಷೇತ್ರ ಹೂಡಕಾಟದಲ್ಲಿರುವ ಸಿದ್ದರಾಮಯ್ಯ ಗೆ ಟಾಂಗ್ ಕೊಟ್ಟ ಬಿ ಎಸ್ ವೈ
ಸಿದ್ದರಾಮಯ್ಯ ಕ್ಷೇತ್ರ ಗೊಂದಲಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ನವರ ಕ್ಷೇತ್ರ ಹೂಡಕಾಟದಲ್ಲಿ ಗೊಂದಲ ಆಗ್ತಿಲ್ಲ.ಕೇವಲ ಈಥರ ಹೇಳ್ಕೊಂಡು ಪ್ರಚಾರ ತಗೋತಿದಾರೆ.ಸುಮ್ನೆ ಜನರ ಮಧ್ಯೆ ನಾನು ಅಲ್ಲಿ ಇಲ್ಲಿ ನಿಲ್ತೀನಿ, ಎಲ್ಲಿ ಬೇಕಾದ್ರೂ ನಿಂತು ಗೆಲ್ತೀನಿ ಅಂತ ವಾತಾವರಣ ಸೃಷ್ಟಿ ಮಾಡಲು ಹೊರಟಿದ್ದಾರೆ.ಇದರಿಂದೇನು ಪ್ರಯೋಜನ ಅಂತ ನಮಗೇನೂ ಅರ್ಥ ಆಗಲ್ವಾ.?ಇದಕ್ಕೆಲ್ಲ ಉತ್ತರ ಕೊಡುವ ಅಗತ್ಯ ಇಲ್ಲ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.