ಡಿಕೆಶಿ ಮೇಲೆ ಸಂಬಿತ್ ಪಾತ್ರಾ ಆರೋಪಗಳಿಗೆ ಸಿದ್ದರಾಮಯ್ಯ ತಿರುಗೇಟು
ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ. ಇದಕ್ಕಾಗಿ ಅಕ್ರಮ ಮಾಡುವ ಕಿಂಗ್ ಪಿನ್ ಗಳ ಹಣ ಸಹಾಯ ಪಡೆಯುತ್ತಿದೆ ಎಂಬ ಆರೋಪಗಳಿಗೆ ಪ್ರತಿಯಾಗಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಡಿಕೆಶಿ ಪ್ರಕರಣವನ್ನು ನೆನಪಿಸಿ ಸುದ್ದಿಗೋಷ್ಠಿಯಲ್ಲಿ ಆರೋಪಗಳ ಸುರಿಮಳೆ ಸುರಿಸಿದ್ದರು.
ಇದರ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಸಂಬಿತ್ ಪಾತ್ರಾ ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಇದು ರಾಜಕೀಯ ಪ್ರೇರಿತ ಸಂಚು. ಜುಮ್ಲಾ ಪಡೆಯುವುದು ಬಿಜೆಪಿಯ ಚಾಳಿ, ಇಂತಹ ಕೆಲಸವೆಲ್ಲಾ ಅವರ ರಾಜಕೀಯ ಅಜೆಂಡಾದಲ್ಲೇ ಇದೆ ಎಂದು ತಿರುಗೇಟು ನೀಡಿದ್ದಾರೆ.