ಆಸ್ತಿಯ ಆಸೆಗಾಗಿ ಹಾಲಿಗೆ ವಿಷ ಹಾಕಿ ಹಸುಗೂಸನ್ನೇ ಕೊಂದ ಪಾಪಿ ಮಲತಾಯಿ?

ಶನಿವಾರ, 2 ಸೆಪ್ಟಂಬರ್ 2023 (08:59 IST)
ಯಾದಗಿರಿ : ಮಲತಾಯಿಯೊಬ್ಬಳು ಆಸ್ತಿಗಾಗಿ ಹಾಲಿಗೆ ವಿಷ ಬೆರೆಸಿ 5 ತಿಂಗಳ ಹಸುಗೂಸನ್ನೇ ಕೊಲೆಗೈದ ಆರೋಪವೊಂದು ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಬಬಲಾದ ಗ್ರಾಮದಲ್ಲಿ ಕೇಳಿಬಂದಿದೆ.
 
ಈ ಘಟನೆ ಆಗಸ್ಟ್ 30ರಂದು ಬಬಲಾದ ಗ್ರಾಮದಲ್ಲಿ ನಡೆದಿದೆ. ದೇವಮ್ಮ ಚೆಟ್ಟಿಗೇರಿ ಆರೋಪಿಯಾಗಿದ್ದು, ಈಕೆ ಹಸುಗೂಸು ಸಂಗೀತಾ ಚೆಟ್ಟಿಗೇರಿಗೆ ಹಾಲಿನಲ್ಲಿ ವಿಷ ಬೆರೆಸಿ ಸಾಯಿಸಿದ್ದಾಳೆ

ಮೃತ ಹಸುಗೂಸು ಸಂಗೀತಾಳಿಗೆ ತಾಯಿ ಶ್ರೀದೇವಿ ಹಾಲು ಕುಡಿಸುತ್ತಿದ್ದಾಗ ಅಲ್ಲಿಗೆ ಬಂದ ದೇವಮ್ಮ, ತಾನು ಹಾಲುಣಿಸುತ್ತೇನೆ ಅಂತಾ ಕರೆದೊಯ್ದಿದ್ದಾಳೆ. ಹೀಗೆ ರೂಮಿಗೆ ಕರೆದೊಯ್ದು ಡೋರ್ ಹಾಕಿ ಹಾಲಿನ ಬಾಟ್ಲಿಯಲ್ಲಿ ವಿಷ ಬೆರೆಸಿ ಕೂಸಿಗೆ ಕೊಟ್ಟಿದ್ದಾಳೆ.

ವಿಷಬೆರೆತ ಹಾಲು ಕುಡಿದ ಸಂಗೀತಾ 3 ಗಂಟೆ ನಂತರ ಬಾಯಲ್ಲಿ ನೊರೆ ಬಂದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾಳೆ. ಸದ್ಯ ವಡಗೇರಾ ಪೊಲೀಸರು ಆರೋಪಿ ದೇವಮ್ಮಳನ್ನ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ