ಸೊಸೆಯನ್ನು ರಕ್ಷಿಸಲು ತನ್ನ ಗಂಡನನ್ನೇ ಕೊಡಲಿಯಿಂದ ಕೊಚ್ಚಿ ಕೊಲೆಗೈದ ಪತ್ನಿ!

ಸೋಮವಾರ, 28 ಆಗಸ್ಟ್ 2023 (13:09 IST)
ಲಕ್ನೋ : ತನ್ನ ಸೊಸೆಯನ್ನು ಲೈಂಗಿಕ ದೌರ್ಜನ್ಯದಿಂದ ಕಾಪಾಡಲು ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈದ ಘಟನೆ ಉತ್ತರ ಪ್ರದೇಶದ  ಬದೌನ್ನಲ್ಲಿ ನಡೆದಿದೆ.

ತೇಜೇಂದರ್ ಸಿಂಗ್ (43) ಹತ್ಯೆಯಾದ ವ್ಯಕ್ತಿ. ಮೊದಲಿಗೆ ಅಪರಿಚಿತರು ಆತನನ್ನು ಕೊಲೆಗೈದಿದ್ದಾರೆ ಎಂದು ಮೃತನ ಪತ್ನಿ ಹಾಗೂ ಕುಟುಂಬಸ್ಥರು ಆರೋಪಿಸಿದ್ದರು. ಆದರೆ ತನಿಖೆ ವೇಳೆ ಆತನ ಪತ್ನಿಯೇ ಕೊಲೆಗೈದಿರುವುದಾಗಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆ ವೇಳೆ ಹತ್ಯೆಗೊಳಗಾದವನ ಪತ್ನಿ ಮಿಥಿಲೇಶ್ ದೇವಿ (40) ತನ್ನ ಪತಿ ವಿಪರೀತ ಹೊಡೆಯುತ್ತಿದ್ದ. ಅಲ್ಲದೇ 19 ವರ್ಷದ ಸೊಸೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದರಿಂದ ಆತ ಮಲಗಿದ್ದಾಗ ಕೊಡಲಿಯಿಂದ ಕತ್ತು ಸೀಳಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ