ಸ್ವಂತ ತಾಯಿಯನ್ನು ಕೊಲೆಗೈದು ಹಾಯಾಗಿ ತೋಟದಲ್ಲಿ ಮಲಗಿದ್ದ ಮಗ! ಕೊಲೆಗೆ ಕಾರಣ ತಿಳಿಯಿರಿ

ಮಂಗಳವಾರ, 29 ಆಗಸ್ಟ್ 2023 (09:57 IST)
ಶಿವಮೊಗ್ಗ : ಹೆತ್ತ ಮಗನೇ ತಾಯಿಯನ್ನು ಕೊಲೆಗೈದ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಮಾವಿನಕೆರೆ ಗ್ರಾಮದಲ್ಲಿ ನಡೆದಿದೆ.

ಸುಲೋಚನಮ್ಮ (60) ಕೊಲೆಯಾದ ತಾಯಿ. ಸಂತೋಷ್ (40) ಕೊಲೆಗೈದ ಆರೋಪಿಯಾಗಿದ್ದು, ತಾಯಿಯನ್ನು ಹತ್ಯೆ ಮಾಡಿದ ಬಳಿಕ ಜಮೀನಿನಲ್ಲಿ ಮಲಗಿದ್ದ. ಪಕ್ಕದ ಮನೆಯವರು ಸುಲೋಚನಮ್ಮಗೆ ಊಟ ಕೊಡಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಭದ್ರಾವತಿಯ ಹೊಸಮನೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಸಂತೋಷ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ