ಮೊಟ್ಟೆಯನ್ನು ಇನ್ನೂ ನಾಲ್ಕು ಹೊಡೀರಿ ಎಂದ ಶಿವಕುಮಾರ್

ಮಂಗಳವಾರ, 23 ಆಗಸ್ಟ್ 2022 (09:05 IST)
ಬೆಂಗಳೂರು : ಮೊಟ್ಟೆ ಬೇಕಿದ್ರೆ ಇನ್ನೂ ನಾಲ್ಕು ಹೊಡೆಯಿರಿ, ಆದರೆ ಜನರನ್ನು ನೆಮ್ಮದಿಯಿಂದ ಬದುಕಲು ಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು. ಹಳ್ಳಿಗೆ ಹೋಗೋದು, ಜನರ ಸಮಸ್ಯೆ ಕೇಳೋದು ಅವರ ಕರ್ತವ್ಯ. ಹಾಗೆ ಹೋದಾಗ ಕಲ್ಲು, ಮೊಟ್ಟೆ ಹೊಡೀತಾರೆ ಅಂದ್ರೆ ಅವರ ಮನಸ್ಥಿತಿ ಹೇಗಿರಬೇಕು ಎಂದು ಪ್ರಶ್ನಿಸಿದ್ದಾರೆ.

ಕೊಡಗಿಗೆ ಯಾವುದೇ ಬಂಡವಾಳ ಹರಿದು ಹೋಗುತ್ತಿಲ್ಲ. ಕೇವಲ ಪ್ರವಾಸೋದ್ಯಮದಿಂದ ಅಲ್ಲಿನ ಜನ ಬದುಕುತ್ತಿದ್ದಾರೆ. ಅವರ ಅನ್ನ ಕಿತ್ತುಕೊಳ್ಳಬೇಡಿ. ಇದೇ ರೀತಿಯಲ್ಲಿ ಅಶಾಂತಿ ಉಂಟಾದ್ರೆ ಜನರ ಬದಕು ಕಷ್ಟ ಆಗುತ್ತೆ. ಮೊಟ್ಟೆ ಬೇಕಿದ್ರೆ ಇನ್ನೂ ನಾಲ್ಕು ಹೊಡೆಯಿರಿ, ಆದರೆ ನೆಮ್ಮದಿಯಿಂದ ಜನರನ್ನು ಬದುಕಲು ಬಿಡಿ ಎಂದು ಒತ್ತಾಯಿಸಿದ್ದಾರೆ. 

ದೇಶದಲ್ಲಿ ರಾಜ್ಯದ ಗೌರವ ಮಣ್ಣುಪಾಲಾಗುತ್ತಿದೆ. ಶಿಕ್ಷಣ, ಪ್ರವಾಸಕ್ಕೆ ಹೊರಗಡೆಯಿಂದ ಜನರು ಬರುತ್ತಿದ್ದಾರೆ. ಅದರಿಂದ ವ್ಯಾಪಾರ ನಡೀತಾ ಇದೆ. ಅದಕ್ಕೂ ಕಲ್ಲು ಹಾಕುವ ಕೆಲಸ ಮಾಡಬೇಡಿ ಎಂದು ಬಿಜೆಪಿ ಸರ್ಕಾರದ ವಿರುದ್ಧ ಡಿ.ಕೆ ಶಿವಕುಮಾರ್ ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ