ಯುವತಿಯನ್ನು ಪಾರ್ಕ್ ನಲ್ಲಿ ಹುರಿದು ಮುಕ್ಕಿದ ಆರು ಕಾಮುಕರು

ಭಾನುವಾರ, 17 ನವೆಂಬರ್ 2019 (14:59 IST)
ಯುವತಿಯೊಬ್ಬಳನ್ನು ಪಾರ್ಕ್ ವೊಂದರಲ್ಲಿ ಆರು ಜನ ದುಷ್ಕರ್ಮಿಗಳು ಹುರಿದು ಮುಕ್ಕಿರೋ ಅಮಾನವೀಯ ಘಟನೆ ನಡೆದಿದೆ.

20 ವರ್ಷದ ಯುವತಿಯೊಬ್ಬಳನ್ನು ಯುವಕನೊಬ್ಬ ಪಾರ್ಕಿಗೆ ಕರೆತಂದಿದ್ದ. ಆದರೆ ಆಕೆ ಜೊತೆಗೆ ಆತ ಅಸಭ್ಯವಾಗಿ ವರ್ತಿಸಲು ಶುರುಮಾಡಿದ್ದಾನೆ.

ಇದನ್ನು ನೋಡಿದ ಗುಂಪೊಂದು ಯುವತಿಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ಹೊಡೆದು ಓಡಿಸಿದ್ದಾರೆ.

ಆಗ ಪಾರ್ಕಿನಲ್ಲಿ ಒಂಟಿಯಾಗಿದ್ದ ಯುವತಿ ಮೇಲೆ ರಕ್ಷಣೆ ಮಾಡಿದ ದುಷ್ಕರ್ಮಿಗಳೇ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಪರಾರಿಯಾಗಿದ್ದಾರೆ.

ಉತ್ತರ ಪ್ರದೇಶದ ನೋಯ್ಡಾ ಎಂಬಲ್ಲಿ ಈ ಘಟನೆ ನಡೆದಿದ್ದು, ಕಾಮುಕರ ಬೇಟೆಗೆ ಪೊಲೀಸರು ಬಲೆ ಬೀಸಿದ್ದಾರೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ