ಹಸುಗಳಿಗೆ ಚರ್ಮ ಗಂಟು ರೋಗ

ಶುಕ್ರವಾರ, 23 ಸೆಪ್ಟಂಬರ್ 2022 (18:52 IST)
ಕೋಲಾರ ಜಿಲ್ಲೆಯಲ್ಲಿ ಹಸುಗಳಿಗೆ ಚರ್ಮ ಗಂಟುರೋಗ ಉಲ್ಬಣಗೊಂಡಿದ್ದು, ಬಂಗಾರಪೇಟೆ ತಾಲೂಕಿನ ಪಚ್ಚಾರ್ಲಹಳ್ಳಿ ಗ್ರಾಮದಲ್ಲಿ ಶಂಕಿತ ಸೋಂಕಿಗೆ ಮೂರು ರಾಸುಗಳು ಬಲಿಯಾಗಿದೆ, ಇದುವರೆಗೆ ಜಿಲ್ಲೆಯಲ್ಲಿ 950 ಕ್ಕು ಹೆಚ್ಚು ಹಸುಗಳಲ್ಲಿ ರೋಗದ ಲಕ್ಷಣಗಳು ಕಂಡುಬಂದಿದ್ದು, ರೋಗಕ್ಕೆ ಸೂಕ್ತ ಲಸಿಕೆ ಲಭ್ಯವಿಲ್ಲದಿದ್ದರು, ಸರ್ಕಾರ ನೀಡಿರುವ ಲಸಿಕೆಯಿಂದಲೇ ರೋಗ ಹತೋಟಿಗೆ ಬರಲಿದೆ ಎಂದು ಪಶು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ, ಕೋಲಾರ ಜಿಲ್ಲೆಯಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಹಸುಗಳಿದ್ದು, ಇದರಲ್ಲಿ ಒಂದೂವರೆ ಲಕ್ಷದಷ್ಟು ಹಸುಗಳಿಗೆ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಹಾಕಿಸಲಾಗಿದೆ, ಆದರೆ ಪಶು ಇಲಾಖೆ ವೈದ್ಯರ ಕೊರತೆಯಿಂದ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ, ಚರ್ಮ ಗಂಟು ಸೋಂಕಿಗೆ ಇದುವರೆಗೂ 7 ಕ್ಕೂ ಹೆಚ್ಚು ಹಸುಗಳು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ, ರೋಗಕ್ಕೆ ತುತ್ತಾದ ಹಸುಗಳು ದಿನೇ ದಿನೇ ದೈಹಿಕವಾಗಿ ಕ್ಷೀಣಿಸುತ್ತಿದ್ದು, ಸೂಕ್ತ ಚಿಕಿತ್ಸೆ ದೊರೆಯದೆ ಹೋದಲ್ಲಿ ಸಾವನ್ನಪ್ಪುವ ಸಾಧ್ಯತೆಯಿದೆ, ಈ ಬಗ್ಗೆ ಮಾತನಾಡಿರುವ ಪಶು ಇಲಾಕೆ ಉಪನಿರ್ದೇಶಕರು ಆತಂಕಪಡುವ ಆಗತ್ಯವಿಲ್ಲ ಎಂದಿದ್ದು, ವೈದ್ಯರ ಸಲಹೆಯನ್ನ ಪಾಲಿಸುವಂತೆ ಮನವಿ ಮಾಡಿದ್ದಾರೆ,

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ