ವಿಧಾನಪರಿಷತ್‍ನ ಶೂನ್ಯವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ.ವೆಂಕಟೇಶ್ ವಿಷಯ ಪ್ರಸ್ತಾಪಿಸಿ, ಬೆಂಗಳೂರು ನಗರದಲ್ಲಿ ನಿರ್ಮಿಸಲಾದ ಸ್ಕೈವಾಕ್‍ಗಳು ಸದುಪಯೋಗವಾಗುತ್ತಿಲ್ಲ. ಜನರ ಸಂಚಾರದ ಬದಲು ಜಾಹಿರಾತುಗಳ ಪ್ರದರ್ಶನಕ್ಕೆ ಬಳಕೆಯಾಗುತ್ತವೆ. ಬಸವೇಶ್ವರ ವೃತ್ತ, ಮಹರಾಣಿ ಕಾಲೇಜು, ಯಶವಂತಪುರ ಸೇರಿದಂತೆ ಹಲವು ಕಡೆಗಳಲ್ಲಿ ಸ್ಕೈವಾಕ್ ಗಳು ಸರಿಯಾಗಿ ಬಳಕೆಯಾಗಿಲ್ಲ ಎಂದು ವಿವರಿಸಿದರು.