ಕಾಂಗ್ರೆಸ್‌ನಲ್ಲಿದ್ದ ತನ್ನ ಆಪ್ತರು ಹಾಗೂ ಅಭಿಮಾನಿಗಳು ಬಿಜೆಪಿ ಸೇರುವಂತೆ ಕರೆ ನೀಡಿದ ಎಸ್.ಎಂ ಕೃಷ್ಣ
ಭಾನುವಾರ, 10 ಫೆಬ್ರವರಿ 2019 (09:58 IST)
ಮಂಡ್ಯ : ತಮ್ಮ ಜತೆ ಕಾಂಗ್ರೆಸ್ ಪಕ್ಷದಲ್ಲಿದ್ದ ಆಪ್ತರು ಹಾಗೂ ಅಭಿಮಾನಿಗಳು ಬಿಜೆಪಿ ಸೇರುವಂತೆ ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರು ಕರೆ ನೀಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,’ ಹಿಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗಣನೀಯ ಪ್ರಮಾಣದಲ್ಲಿ ಮತ ಪಡೆದಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಕಮಲ ಅರಳಿಸಲು ಇದು ಒಳ್ಳೆಯ ಸಮಯವಾಗಿದೆ. ಆದಕಾರಣ ತಮ್ಮ ಜತೆ ಕಾಂಗ್ರೆಸ್‌ನಲ್ಲಿದ್ದ ಆಪ್ತರು ಹಾಗೂ ಅಭಿಮಾನಿಗಳು ಬಿಜೆಪಿ ಸೇರುವಂತೆ ಕರೆ ನೀಡಿದ್ದಾರೆ.
‘ಭಾರತ ರಕ್ಷಣೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಬೆಳೆವಣಿಗೆ ಆಗುತ್ತಿದ್ದು, ಮೋದಿ ತಾಕತ್ತು ಪಾಕಿಸ್ತಾನಕ್ಕೆ ಗೊತ್ತು. ಸದ್ಯ ಪಾಕಿಸ್ತಾನ ಅನಾಯಕತ್ವದ ಹಾದಿ ಹಿಡಿದಿದ್ದು, ಭಾರತ ಆರ್ಥಿಕವಾಗಿ ಬೆಳೆಯುತ್ತಿದೆ. ಅದಕ್ಕೆ ಪ್ರಧಾನಿಗಳಾಗಿರುವ ಮೋದಿ ಕಾರಣ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ