ಸಂವಿಧಾನಬದ್ಧ ಸರ್ಕಾರ ಉರುಳಿಸಲು ಮೂವರಿಂದ ತಂತ್ರ- ರಣದೀಪ್ ಸಿಂಗ್ ಸುರ್ಜೇವಾಲ

ಶನಿವಾರ, 9 ಫೆಬ್ರವರಿ 2019 (10:50 IST)
ನವದೆಹಲಿ : ಸಂವಿಧಾನಬದ್ಧ ಸರ್ಕಾರ ಉರುಳಿಸಲು ಪ್ರಧಾನಿ ಮೋದಿ, ಅಮಿತ್ ಶಾ, ಬಿಎಸ್ ಯಡಿಯೂರಪ್ಪ ಈ ಮೂವರು  ತಂತ್ರ ಮಾಡುತ್ತಿದ್ದಾರೆ ಎಂದು ಎಐಸಿಸಿ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ.


ಬಿಜೆಪಿ ಆಪರೇಷನ್ ಕಮಲದ ಆಡಿಯೋ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ಸುದ್ಧಿಗೋಷ್ಠಿ ನಡೆಸಿದ್ದು, ಈ ವೇಳೆ ಮಾತನಾಡಿದ ಎಐಸಿಸಿ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಅವರು,’ ಶಾಸಕರ ಚುನಾವಣಾ ಖರ್ಚು ನೀಡ್ತೇನೆ ಅಂತಾ ಒಬ್ಬ ಶಾಸಕನಿಗೆ 10 ಕೋಟಿ ರೂ.ಆಮಿಷ ಒಡ್ಡುತ್ತಿದ್ದಾರೆ. ಹಲವು ಶಾಸಕರಿಗೆ ಬಿಎಸ್ ವೈ ಹೇಳಿದ್ದಾರೆ. ಒಟ್ಟು 200 ಕೋಟಿ ರೂ. ಆಮಿಷ ಒಡ್ಡಿದ್ದಾರೆ. ಇದಕ್ಕೆ ಕಪ್ಪು ಹಣ ಬಳಸುತ್ತಿದ್ದಾರೆಯೇ? 450 ಕೋಟಿ ಹಣ ಯಾವ ಮೂಲದಿಂದ ಬಂತು?ಇದು ಕಪ್ಪು ಹಣ ಅಲ್ವಾ?’ ಎಂದು ಪ್ರಶ್ನಿಸಿದ್ದಾರೆ.


‘ಜಡ್ಜ್ ಗಳನ್ನು ಬುಕ್ ಮಾಡಿರುವುದಾಗಿ ಅವರು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಜಡ್ಜ್ ಹೆಸರನ್ನು ಇದರಲ್ಲಿ ಬಳಸಿದ್ದಾರೆ. ಸ್ಪೀಕರ್ ಗೂ ಹಣ ನೀಡುವ ಬಗ್ಗೆ ಅವರು ಹೇಳಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ