ಮೆಟ್ರೋ ಮಾದರಿಯಲ್ಲಿ ಬಿಎಂಟಿಸಿ ಬಸ್‌ ಪ್ರಯಾಣಕ್ಕೆ ಸ್ಮಾರ್ಟ್ ಟಿಕೆಟ್‌

ಭಾನುವಾರ, 13 ನವೆಂಬರ್ 2022 (20:27 IST)
ನವೆಂಬರ್ 1 ರಿಂದ ಮೆಟ್ರೋದಲ್ಲಿ ಮೊಬೈಲ್ ಟಿಕೆಟ್ ಜಾರಿಯಾಗಿದ್ದು, ಸುಲಭವಾಗಿ ಜನರು ಅದನ್ನು ಬಳಕೆ ಮಾಡುತ್ತಿದ್ಧಾರೆ. ಇದೀಗ ಅದೇ ಹಾದಿಯಲ್ಲಿ ಸಾಗುತ್ತಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಿಎಂಟಿಸಿಯಲ್ಲೂ ಹೊಸ ತಂತ್ರಾಂಶ ಬಳಸಿ ಮೊಬೈಲ್ ಟಿಕೆಟ್ ಜಾರಿಗೊಳಿಸಲು ಯೋಜನೆ ರೂಪಿಸಲಾಗ್ತಿದೆ. ಈಗ ಬಿಎಂಟಿಸಿ ವತಿಯಿಂದಲೂ ಬಸ್‌ ಟಿಕೆಟ್‌ನ್ನು ಮೊಬೈಲ್‌ ಮೂಲಕ ಆನ್‌ಲೈನ್‌ನಲ್ಲಿ ಹಣ ಪಾವತಿಸಿ ಖರೀದಿಸಲು ಅವಕಾಶ ಮಾಡಿಕೊಡುತ್ತಿದೆ. ರಾಜಧಾನಿಯಲ್ಲಿ ಪ್ರತಿ ದಿನ 35 ಲಕ್ಷ  ಮಂದಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಬಸ್‌ ಸಂಚಾರದ ಆರಂಭದಿಂದಲೂ ಪ್ರಯಾಣಿಕರಿಗೆ ಟಿಕೆಟ್‌ ನೀಡುವ ಪದ್ಧತಿ ಮುಂದುವರೆಸಿಕೊಂಡು ಬಂದಿದೆ. ಇತ್ತೀಚೆಗೆ ಟಿಕೆಟ್‌ ನೀಡುವ ಪದ್ದತಿಯುಲ್ಲಿ ಬದಲಾವಣೆ ಮಾಡಿಕೊಂಡು ಯಂತ್ರದ ಮೂಲಕ ಟಿಕೆಟ್‌ ವಿತರಣೆಗೆ ಮುಂದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ