ಚಾಮರಾಜಪೇಟೆಯಲ್ಲಿ ವಿವಾದದ ಹೊಗೆ
ಚಾಮರಾಜಪೇಟೆ ಮೈದಾನ ವಿವಾದದ ವಿಚಾರವಾಗಿ ವಿರೋಧಗಳ ಹೊಗೆಯಾಡ್ತಿದೆ. ಇದರ ಮಧ್ಯೆಯೇ ವಿವಾದಕ್ಕೆ ಕಾರಣವಾಗಿರೋ ಮೈದಾನದಲ್ಲಿ ಕುರಿಗಳ ವ್ಯಾಪಾರ ಭರ್ಜರಿಯಾಗೇ ನಡೆಯುತ್ತಿದೆ. ಇದೇ ತಿಂಗಳು ಬಕ್ರೀದ್ ಇರುವ ಹಿನ್ನೆಲೆ ತುಸು ಹೆಚ್ಚಾಗೇ ವ್ಯಾಪಾರ-ವಹಿವಾಟು ನಡೆಯುತ್ತಿದೆ. ಮೈದಾನದಲ್ಲಿ ಹಿಂದೂ-ಮುಸ್ಲೀಂ ಎನ್ನದೇ ಎಲ್ಲಾ ಧರ್ಮದವರು ಕುರಿಗಳ ವ್ಯಾಪಾರದಲ್ಲಿ ಬ್ಯುಸಿಯಾಗಿದ್ದು, ಧರ್ಮದ ಹೆಸರಲ್ಲಿ ಜಾಗಕ್ಕೆ ಬಡಿದಾಡ್ತಿರೋ ಜನರ ಮಧ್ಯೆ ಸಾಮರಸ್ಯ ಸಂದೇಶ ಸಾರುತ್ತಿದೆ.