ಕೋಲಾರ: ಶಾಲೆಗೆ ಬಂದು ಪಾಠ ಕೇಳಿ ಎಂದರೆ ಕೆಲವು ಬಾರಿ ಮಕ್ಕಳು ಬರುವುದೇ ಇಲ್ಲ. ಆದರೆ ಈ ಶಾಲೆಯಲ್ಲಿ ಮಾತ್ರ ಶಿಕ್ಷಕರು ಕರೆಯದಿದ್ದರೂ ಕೊಠಡಿಯಲ್ಲಿ ಹಾವೊಂದು ಪ್ರತ್ಯಕ್ಷವಾಗಿತ್ತು.
ರಾಮನಗರ ತಾಲೂಕಿನ ಕವಣಾಪುರ ಗ್ರಾಮದ ಶಾಲೆಯಲ್ಲಿ ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಇವತ್ತು ಆಶ್ಚರ್ಯವೋ ಆಶ್ಚರ್ಯ.
ಶಾಲೆಯಲ್ಲಿ ಕಂಡ ಹಾವನ್ನು ನೋಡಿ ಕೆಲಕಾಲ ಗಲಿಬಿಲಿಗೊಂಡರು. ಏಳೆಂಟು ಅಡಿ ಉದ್ದದ ನಾಗರಹಾವನ್ನು ಕಂಡು ಎಲ್ಲರೂ ಕೆಲಕಾಲ ಗಾಬರಿಗೆ ಒಳಗಾದರು. ಕೊನೆಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಲಾಯಿತು.
ಉರಗ ತಜ್ಞ ಅಮಾನ್ ಖಾನ್ ಸ್ಥಳಕ್ಕೆ ಆಗಮಿಸಿ ನಾಗರಹಾವು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಇತ್ತ ಶಿಕ್ಷಕರು ಹಾಗೂ ಮಕ್ಕಳು ಬದುಕಿದೆಯಾ ಬಡ ಜೀವವೇ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.