ನಾಳೆ ಹಸೆಮಣೆಯೇರಬೇಕಿದ್ದ ಯೋಧ ಅನಾರೋಗ್ಯಕ್ಕೀಡಾಗಿ ಸಾವು

ಶುಕ್ರವಾರ, 30 ಜೂನ್ 2017 (16:22 IST)
ಹುಬ್ಬಳ್ಳಿ:ನಾಳೆ ವಿವಾಹವಾಗಬೇಕಿದ್ದ ಯೋಧನೊಬ್ಬ ತೀವ್ರ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಹೂವಿನ ಹಡಗಲಿಯಲ್ಲಿ ನಡೆದಿದೆ.
 
ಸಶಸ್ತ್ರ ಮೀಸಲು ಪಡೆಯ ಯೋಧರಾಗಿ ಜಾರ್ಖಂಡ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹನುಮಂತಪ್ಪ ಕೊರ್ಲಗಟ್ಟಿ (30) ವಿವಾಹವಾಗಲು ಇತ್ತೀಚೆಗೆ ರಜೆಯ ಮೇಲೆ ಊರಿಗೆ ಬಂದಿದ್ದರು. ತೀವ್ರ ಜ್ವರದಿಂದ ಬಳಲುತ್ತಿದ್ದ ಯೋಧನನ್ನು ನಿನ್ನೆ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯೋಧ ಹನುಮಂತಪ್ಪ ಸಾವನ್ನಪ್ಪಿದ್ದಾರೆ.
 
ಜುಲೈ1 ರಂದು ವಿವಾಹ ನಿಗದಿಯಾಗಿದ್ದರಿಂದ ಮದುವೆ ಕಾರ್ಡ್ ಹಂಚುವ ಗಡಿಬಿಡಿಯಲ್ಲಿ ಜ್ವರವನ್ನು ನಿರ್ಲಕ್ಷಿಸಿದ್ದು, ಸೂಕ್ತ ಚಿಕಿತ್ಸೆ ಪಡೆದಿರಲಿಲ್ಲ ಎನ್ನಲಾಗಿದೆ. ಇಇದರಿಂದ ಜ್ವರ ಹೆಚ್ಚಿದ ಪರಿಣಾಮ ಯೋಧ ಸಾವನ್ನಪ್ಪಿದ್ದಾರೆ. ಊರ ಹೆಮ್ಮೆಯ ಪುತ್ರನ ವಿವಾಹಕ್ಕೆಂದು ಸಿದ್ಧತೆ ಮಾಡಿಕೊಂದಿದ್ದ ಊರು ಯೋಧನ ಸವಿನಿಂದ ಶೋಕಸಾಗರದಲ್ಲಿ ಮುಳುಗಿದೆ.
 

ವೆಬ್ದುನಿಯಾವನ್ನು ಓದಿ