ರೈತರ ಬೆಳೆಗೆ ಸೈನಿಕರ ಕಾಟ

ಶನಿವಾರ, 6 ಅಕ್ಟೋಬರ್ 2018 (15:17 IST)
ಆ‌ ಜಿಲ್ಲೆಯ ಹಲವೆಡೆ ರೈತರ ಬೆಳೆಯನ್ನ ಸೈನಿಕರು ಹಾಳು ಮಾಡುತ್ತಿದ್ದಾರೆ. 

ಸೈನಿಕರೆಂದರೆ ನಮ್ಮ ದೇಶ ಕಾಯುವವರಲ್ಲ. ಇದು ಒಂದು ಜಾತಿಯ ಕೀಟದ ಹೆಸರು. ಈ‌ ಸೈನಿಕ ಕೀಟಗಳು ರೈತರು ಬೆಳೆದ ರಾಗಿ, ಜೋಳ, ಉದ್ದು, ಇತರೆ ಎಲ್ಲಾ ಬೆಳೆಗಳನ್ನ ನಾಶ ಮಾಡುತ್ತಿವೆ.

ತುಮಕೂರು ಜಿಲ್ಲೆಯ ಮದುಗಿರಿ, ಕೊರಟಗೆರೆ, ಪಾವಗಡ ಸೇರಿದಂತೆ ಇನ್ನೂ ಹಲವಡೆ ಈ ಸೈನಿಕ ಕೀಟಗಳ ಹಾವಳಿ ಸುನಾಮಿಯಂತೆ ಹಬ್ಬಿದೆ. ಅಲ್ಪ ಸ್ವಲ್ಪ ಮಳೆಯಲ್ಲೆ  ಬೆಳೆದ ಬೆಳೆಗಳ ತೆನೆಗಳನ್ನ ಕಡಿದು ಸಂಪೂರ್ಣ ಒಣಗುವಂತೆ ಮಾಡುತ್ತಿದೆ.

ಇದರಿಂದ ರೈತರು ಬೆಳೆದ ಸಾವಿರಾರು ಎಕರೆ ಬೆಳೆ ಒಣಗಿ ಹೊಗಿ ಜಾನುವಾರುಗಳಿಗೂ ಮೇವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಷ್ಟ ಪಟ್ಟು ಬೆಳೆ ಬೆಳೆದ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ