ಸ್ಪೋಟದ ಸ್ಥಳದಲ್ಲಿ ಕೆಲ ವಸ್ತುಗಳು ಸಂಗ್ರಹ

ಮಂಗಳವಾರ, 27 ಡಿಸೆಂಬರ್ 2022 (16:56 IST)
ಹಾಸನದ ಕೊರಿಯರ್ ಆಫೀಸ್​ನಲ್ಲಿ ಮಿಕ್ಸಿ ಸ್ಪೋಟ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಘಟನಾ ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಹಾಸನದ ಕೊರಿಯರ್ ಆಫೀಸ್​ನಲ್ಲಿ ಮಿಕ್ಸಿ ಅನುಮಾನಾಸ್ಪದವಾಗಿ ಸ್ಫೋಟಗೊಂಡಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಂಭೀರವಾಗಿ ಗಾಯಗೊಂಡ ಮಾಲೀಕ ಶಶಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.. ಎರಡು ದಿನಗಳ ಹಿಂದೆ ಕೊರಿಯರ್‌ ಆಫೀಸ್​ಗೆ ಮಿಕ್ಸಿ ಪಾರ್ಸಲ್ ಬಂದಿತ್ತು. ಅದನ್ನು ನಗರದ ವ್ಯಕ್ತಿಯೊಬ್ಬರಿಗೆ ಹೋಮ್‌ ಡೆಲಿವರಿ ಮಾಡಿದ್ದರು. ಆದರೆ ಮಿಕ್ಸಿಗೆ ನಾನು ಆರ್ಡರ್ ಮಾಡಿಲ್ಲ ಎಂದು ಕೊರಿಯರ್‌ ಆಫೀಸ್​ಗೆ ಆ ವ್ಯಕ್ತಿ ವಾಪಸ್ ನೀಡಿದ್ದಾನೆ. ವಾಪಸ್ ಪಡೆಯುವ ವೇಳೆ ಮಿಕ್ಸಿ ಆನ್ ಮಾಡಿ ಪರಿಶೀಲಿಸಿದಾಗ ಮಿಕ್ಸಿ ಬ್ಲಾಸ್ಟ್‌ ಆಗಿದೆ‌. ಇನ್ನು ಸ್ಪೋಟದ ಸ್ಥಳದಲ್ಲಿ ಕೆಲ ವಸ್ತುಗಳನ್ನು ಸಂಗ್ರಹಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ