ವಿವೇಕಾನಂದರ ವಿಚಾರಧಾರೆಗಳನ್ನು ತಿರುಚಲಾಗುತ್ತಿದೆ: ಸಿಎಂ ಸಿದ್ದರಾಮಯ್ಯ

ಬುಧವಾರ, 18 ಜನವರಿ 2017 (15:07 IST)
ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ತಿರುಚಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
 
ರಾಷ್ಟ್ರೀಯ ಯುವ ಸಪ್ತಾಹದಲ್ಲಿ ಮಾತನಾಡಿದ ಅವರು, ಧರ್ಮ ಎನ್ನುವುದು ಪೂಜೆ, ಮಂತ್ರದಿಂದ ಸಿಗುವುದಿಲ್ಲ. ಮನುಷ್ಯತ್ವದಿಂದ ಧರ್ಮ ಸಾಕಾರವಾಗುತ್ತದೆ. ಸ್ವಾಮಿ ವಿವೇಕಾನಂದರು ಧರ್ಮಕ್ಕಿಂತ ಮನುಷ್ಯತ್ವ ಒತ್ತು ನೀಡಿದ್ದರು. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಿವೇಕಾನಂದರ ದಿನಾಚಾರಣೆ ಆಚರಿಸಿ ಅವರ ವಿಚಾರಧಾರೆಗಳನ್ನು ತಿರುಚಲು ಪ್ರಯತ್ನಿಸುತ್ತಿವೆ ಎಂದು ದೂರಿದರು. 
 
ಮೊದಲು ಹಸಿದವರಿಗೆ ಊಟ ಕೊಡಿ ಆಮೇಲೆ ಧರ್ಮ ಎಂದು ಹೇಳಿದ್ದ ವಿವೇಕಾನಂದರು ಕೇವಲ 39 ವರ್ಷ ಬದುಕಿದ್ದರು. ಅವರು ಎಷ್ಟು ವರ್ಷ ಬದುಕಿದ್ದರು ಎನ್ನುವುದು ಮುಖ್ಯವಲ್ಲ. ಅವರ ವಿಚಾರಧಾರೆಗಳು ಮುಖ್ಯ ಎಂದರು.  
 
ಅಸ್ಪೃಶ್ಯತೆ ಎನ್ನುವುದು ಮಾನಸಿಕ ರೋಗ. ಕೆಲವರು ತಮ್ಮ ಸ್ವಾರ್ಥಕಾಗಿ ಅಸ್ಪೃಶ್ಯತೆಯನ್ನು ಸೃಷ್ಟಿಸಿದ್ದಾರೆ. ಮೊದಲು ನಾವು ಇದರಿಂದ ಹೊರ ಬರಬೇಕಾಗಿದೆ. ವಿವೇಕಾನಂದರ ವಿಚಾರಧಾರೆ ಅರೆತರೆ ಇದೇಲ್ಲ ಸಾಧ್ಯ ಎಂದು ಹೇಳಿದರು.
 
ಜ್ಯಾತ್ಯಾತೀತ ಎಂದರೆ ಧರ್ಮ ಬಿಡಬೇಕು ಎಂದಲ್ಲ. ಧರ್ಮಗಳಲ್ಲಿ ಸಹಿಷ್ಣುತೆ ಇರಬೇಕು ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ