ಆಸ್ತಿಗಾಗಿ ವೃದ್ಧನ ಮರ್ಮಾಂಗಕ್ಕೆ ಇರುವೆ ಬಿಟ್ಟ ದುರುಳ ಮಗ, ಸೊಸೆ!

ಗುರುವಾರ, 19 ಜನವರಿ 2017 (19:05 IST)
ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಮಗ ಹಾಗೂ ಸೊಸೆ ಸೇರಿಕೊಂಡು ವೃದ್ಧನ ಮರ್ಮಾಂಗಕ್ಕೆ ಇರುವೆ ಬಿಟ್ಟು ಚಿತ್ರಹಿಂಸೆ ನೀಡಿದ ಹೇಯ ಕೃತ್ಯ ದಾವಣಗೆರೆ ಜಿಲ್ಲೆಯ ಮಲೇಬೆನ್ನೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಬಿಎಸ್‌ಎನ್‌ಎಲ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ರಾಜಣ್ಣ ಎಂಬುವವರು ಚಿತ್ರಹಿಂಸೆಗೆ ಒಳಗಾದ ವ್ಯಕ್ತಿ ಎಂದು ತಿಳಿದು ಬಂದಿದ್ದು, ಇವರ ಮಗ ನವೀನ್ ಹಾಗೂ ಸೊಸೆ ಸೌಮ್ಯ ಆಸ್ತಿಯ ಆಸೆಗಾಗಿ ತಂದೆಯನ್ನು ಮನೆಯಲ್ಲಿ ಕೂಡಿಹಾಕಿದ್ದರು. ಸಾಲದಕ್ಕೆ ಅವರ ಮರ್ಮಾಂಗಕ್ಕೆ ಇರುವೆ ಬಿಟ್ಟು ಚಿತ್ರಹಿಂಸೆ ನೀಡುತ್ತಿದ್ದರು ಎಂದು ಹೇಳಲಾಗುತ್ತಿದೆ. 
 
ಮನೆಯಿಂದ ತಪ್ಪಿಸಿಕೊಂಡು ಬಂದ ರಾಜಣ್ಣ ಅವರು ನಗರದ ರಿಂಗ್ ರೋಡ್‌ ಆಟೋ ನಿಲ್ದಾಣದ ಬಳಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈ ವೇಳೆ ಕರ್ನಾಟಕ ಯುವಶಕ್ತಿ ವೇದಿಯ ಕಾರ್ಯಕರ್ತರು ರಾಜಣ್ಣ ಅವರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ.
 
ಈ ಬಗ್ಗೆ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ