ಪತ್ನಿಯ ಮೊಬೈಲ್‌ ಎಂದು ಮಾವನ ಮೊಬೈಲ್‌ಗೆ ಅಶ್ಲೀಲ ವಿಡಿಯೋ: ಅಳಿಯನ ಬಂಧನ

ಬುಧವಾರ, 22 ಮಾರ್ಚ್ 2017 (17:14 IST)
ಪತ್ನಿಯ ಮೊಬೈಲ್ ಎಂದು ತಿಳಿದು ಮಾವನ ಮೊಬೈಲ್‌ಗೆ ಅಶ್ಲೀಲ ವಿಡಿಯೇ ಕಳುಹಿಸಿದ ಅಳಿಯನನ್ನು ಅಶೋಕ್ ನಗರ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
 
ಪತ್ನಿಯಿಂದ ದೂರವಾಗಿರುವ ಆರೋಪಿ ಅರುಣ್ ನಾಯಕ್, ಪತ್ನಿಗೆ ಮಾನಸಿಕ ಹಿಂಸೆ ನೀಡಲು ವಿಡಿಯೋ ಕಳುಹಿಸಿದ್ದನು ಎನ್ನಲಾಗಿದೆ. ಮಾವ ಮೋಹನ್ ಕಡೆಮನಿ ಅಳಿಯನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
ಪತಿಯಿಂದ ದೂರವಾಗಿ ತಂದೆತಾಯಿಯೊಂದಿಗೆ ಉಳಿದಿದ್ದ ಪತ್ನಿ, ತನ್ನ ತಂದೆಯ ಮೊಬೈಲ್‌ನಿಂದ ಪತಿಗೆ ಕರೆ ಮಾಡಿದ್ದಳು ಎನ್ನಲಾಗಿದೆ. ಈ ಮೊಬೈಲ್ ನಂಬರ್ ತನ್ನ ಪತ್ನಿಯದೇ ಎಂದು ಭಾವಿಸಿದ ಅರುಣ್ ನಾಯಕ್, ನಿರಂತರವಾಗಿ ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಪತಿ ಮತ್ತು ಪತ್ನಿ ಮಧ್ಯೆ ವಿರಸವಿದ್ದರಿಂದ ಪತ್ನಿ ವಿಚ್ಚೇದನಕ್ಕಾಗಿ ಕೌಟಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪತ್ನಿ ನನ್ನಿಂದ ದೂರವಾಗುತ್ತಿರುವುದರಿಂದ ಅವಳಿಗೆ ಮಾನಸಿಕ ಹಿಂಸೆ ನೀಡಬೇಕು ಎನ್ನುವ ಉದ್ದೇಶದಿಂದ ಪತಿ ಮಹಾಶಯ ಅಶ್ಲೀಲ ವಿಡಿಯೋಗಳನ್ನು ರವಾನಿಸಿದ್ದನು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ