ಅಪಘಾತ ಮಾಡಿಸಿ ತಾಯಿಯನ್ನೇ ಕೊಂದ ಪಾಪಿ ಮಗ
65 ವರ್ಷದ ನಾಗಮ್ಮ ಕೊಲೆಗೀಡಾದ ದುರ್ದೈವಿ. 45 ವರ್ಷದ ಮಗ ಹೇಮರಾಜ್ ತಾಯಿಯನ್ನೇ ಜೀಪಿಗೆ ಡಿಕ್ಕಿ ಹೊಡೆಸಿ ಕೊಲೆ ಮಾಡಿದ್ದಾನೆ. ಹಣಕಾಸಿನ ವಿಚಾರಕ್ಕಾಗಿ ತಾಯಿ-ಮಗನ ನಡುವೆ ನಿತ್ಯ ಜಗಳವಾಗುತ್ತಿತ್ತು.
ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಗ ತಾಯಿಯನ್ನು ಜೀಪಿನತ್ತ ತಳ್ಳಿ ಕೊಲೆ ಮಾಡಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.