300 ಕ್ಕೂ ಹೆಚ್ಚು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಮಾಜಿ ಸಚಿವನ ಪುತ್ರ
ಶನಿವಾರ, 3 ಜೂನ್ 2017 (13:48 IST)
ಜಮ್ಮು ಕಾಶ್ಮಿರದ ಮಾಜಿ ಸಮಾಜ ಕಲ್ಯಾಣ ಖಾತೆ ಸಚಿವನ ಪುತ್ರ ಹಬೀಬ್ ಎನ್ನುವ ಕಾಮುಕನೇ 300 ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಹಬೀಬ್ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಂಪೆನಿ ತನ್ನದೇ ಎಂದು ಬಿಲ್ಡಪ್ ಕೊಡುತ್ತಿದ್ದ ಎನ್ನಲಾಗಿದೆ. ಸಂದರ್ಶನಕ್ಕೆ ಬಂದಿರುವ ಯುವತಿಯರ ಮೊಬೈಲ್ ನಂಬರ್‌ಗಳನ್ನು ಕಂಪೆನಿಯ ರಿಜಿಸ್ಟರ್‌ನಿಂದ ಪಡೆದು ದೂರವಾಣಿ ಕರೆ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ಹಬೀಬ್ ಯುವತಿಯರಿಗೆ ದೂರವಾಣಿ ಕರೆ ಮಾಡಿ ತಾನೇ ಕಂಪೆನಿಯ ಮಾಲೀಕನೆಂದು ಪರಿಚಯಿಸಿಕೊಂಡು ಕೆಲಸಕೊಡುವುದಾಗಿ ನಂಬಿಸಿ, ನಂತರ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದನು ಎಂದು ತಿಳಿದು ಬಂದಿದೆ.
ಉಡುಪಿಯ ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಿದ್ದರಿಂದ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಯುವತಿ ದೂರು ನೀಡಿದ ನಂತರ ಆರೋಪಿ ಹಬೀಬ್‌ನ ಕರಾಳ ಇತಿಹಾಸ ಬೆಳಕಿಗೆ ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.