ಅನೈಸರ್ಗಿಕ ಲೈಂಗಿಕ ಕಿರುಕುಳ ಕೇಸ್: ಸೂರಜ್ ರೇವಣ್ಣ ವಿರುದ್ಧ ಸಾಕ್ಷ್ಯಗಳೇ ಇಲ್ಲ

Krishnaveni K

ಗುರುವಾರ, 26 ಜೂನ್ 2025 (09:59 IST)
ಬೆಂಗಳೂರು: ಅನೈಸರ್ಗಿಕ ಲೈಂಗಿಕ ಕಿರುಕುಳ ಕೇಸ್ ನಲ್ಲಿ ಸಿಲುಕಿಕೊಂಡಿದ್ದ ಎಂಎಲ್ ಸಿ ಸೂರಜ್ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆಯಲ್ಲಿ ತನಿಖಾಧಿಕಾರಿಗಳು ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದಾರೆ.

ಶಾಸಕ ಎಚ್ ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣ ವಿರುದ್ಧ ತಮ್ಮ ಹಾಸನದ ಗೆಸ್ಟ್ ಹೌಸ್ ನಲ್ಲಿ ಪಕ್ಷದ ಕಾರ್ಯಕರ್ತನೊಬ್ಬನ ಮೇಲೆಯೇ ಅಸಹಜ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಅವರನ್ನು ಸಿಐಡಿ ಪೊಲೀಸರು ಬಂಧಿಸಿ  ವಿಚಾರಣೆ ನಡೆಸಿದ್ದರು.

ಪ್ರಜ್ವಲ್ ರೇವಣ್ಣ ಯುವತಿಯರಿಗೆ ಲೈಂಗಿಕ ಕಿರುಕುಳ ಆರೋಪದಲ್ಲಿ ಬಂಧಿತರಾದ ಬಳಿಕ ರೇವಣ್ಣ ದಂಪತಿಯ ಇನ್ನೊಬ್ಬ ಪುತ್ರ ಅಸಹಜ ಲೈಂಗಿಕ ಕಿರುಕುಳ ಕೇಸ್ ನಲ್ಲಿ ಬಂಧಿತರಾಗಿದ್ದು ಕುಟುಂಬಕ್ಕೆ ತೀವ್ರ ಮುಜುಗರ ತಂದಿತ್ತು.

ಇದೀಗ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಸಿಐಡಿ ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನಲೆಯಲ್ಲಿ ವಿಶೇಷ ಜನಪ್ರತಿನಿಧಿಗಳ ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಸಿದೆ. ಹೀಗಾಗಿ ಈಗ ಪ್ರಜ್ವಲ್ ರೇವಣ್ಣಗೆ ಪ್ರಕರಣದಿಂದ ಮುಕ್ತಿ ಸಿಕ್ಕಿದೆ. ಇಷ್ಟು ದಿನಗಳವರೆಗೂ ಸೂರಜ್ ರೇವಣ್ಣ ಜಾಮೀನಿನ ಮೇಲೆ ಹೊರಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ