ಶಾಸಕರು ಹೇಳಿದ್ದೇ ಹೇಳಿದರೆ ಸಾಯಬೇಕಾಗುತ್ತೆ ಎಂದ ಸ್ಪೀಕರ್

ಸೋಮವಾರ, 22 ಜುಲೈ 2019 (18:24 IST)
ಮೈತ್ರಿ ಸರಕಾರದ ವಿಶ್ವಾಸ ಮತ ಚರ್ಚೆಯ ಸಂದರ್ಭದಲ್ಲಿ ಸ್ಪೀಕರ್ ಪದೇ ಪದೇ ಗರಂ ಆಗಿರೋ ಘಟನೆ ನಡೆದಿದೆ.

ಕಳೆದೆರಡು ದಿನಗಳಿಂದ ಆಡಳಿತ ಪಕ್ಷಗಳ ಸದಸ್ಯರು, ಪಕ್ಷಾಂತರ ನಿಷೇಧ ಕಾಯ್ದೆ, ಶೆಡ್ಯುಲ್ 10 ಹಾಗೂ ವಿಪಕ್ಷ ವಿರುದ್ಧ ಕಿಡಿಕಾರುತ್ತಿದ್ದಾರೆ.

ಈ ನಡುವೆ ಈಶ್ವರ ಖಂಡ್ರೆ ಸದನದಲ್ಲಿ ಮಾತನಾಡುತ್ತಿರುವಾಗ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಆಗ ಸ್ಪೀಕರ್ ಪ್ರವೇಶಿಸಿ, ಹೇಳಿದ್ದನ್ನೇ ಯಾರೂ ಮತ್ತೆ ಪ್ರಸ್ತಾಪಿಸಬೇಡಿ. ಹೊಸ ಹಾಡು ಹೇಳಿದ್ರೆ ನಾವೂ ಕೇಳಬಹುದು ಎಂದ್ರು.

ನಿಮ್ಮಲ್ಲಿ ಯಾರು? ಎಷ್ಟು ಸಲ ಲೈಬ್ರರಿಗೆ ಹೋಗುತ್ತೀರಾ? ಲೈಬ್ರರಿಯಿಂದ ಹಾಜರಿ ಬುಕ್ ತರಿಸಲಾ? ಲೈಬ್ರರಿಗೆ ಹೋಗದೇ ಹೊಸ ವಿಷಯ ತಿಳಿದುಕೊಳ್ಳದೇ ಹೇಳಿದ್ದನ್ನೆ ಹೇಳಬೇಡಿ ಎಂದ್ರು. ಹೇಳಿದ್ದನ್ನೇ ಹೇಳಿದ್ರೆ ನಾವು ಸಾಯಬೇಕಾಗುತ್ತೆ ಎಂದ್ರು.

ಬೇರೆ ಶಾಸಕರು ಮಾಡಿರೋ ಪ್ರಸ್ತಾಪಿತ ವಿಷಯ ಬಿಟ್ಟು ಬೇರೆ ಮಾತಾಡಿ, ಹೊಸ ಶಾಸಕರಿಗೆ ಮಾತನಾಡೋಕೆ ಅವಕಾಶ ನೀಡಬೇಕಿದೆ ಅಂತ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ