ಚಂದ್ರಯಾನ ಯಶಸ್ಸಿಗೆ ಕುಕ್ಕೆಯಲ್ಲಿ ವಿಶೇಷ ಪೂಜೆ

ಸೋಮವಾರ, 21 ಆಗಸ್ಟ್ 2023 (17:47 IST)
ಚಂದ್ರಯಾನದ ಬಗ್ಗೆ ನಟ ಪ್ರಕಾಶ್ ರೈ ಮಾಡಿದ ಕೀಟಲೆ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ನಟನನ್ನು ನೆಟ್ಟಿಗರು ತೀವ್ರತರನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ನಡುವೆ ನಾಗರ ಪಂಚಮಿ ದಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂದ್ರಯಾನ ಯಶಸ್ಸಿಗಾಗಿ ವಿಶೆಷ ಪೂಜೆ ನಡೆದಿದೆ. ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಹೆಮ್ಮೆಯ ಇಸ್ರೋ ಸಂಸ್ಥೆಯ ಚಂದ್ರಯಾನ-3 ನೌಕೆಯು ಯಶಸ್ವಿಗಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಇತಿಹಾಸ ನಿರ್ಮಿಸಲಿ ಮತ್ತು ಇದರೊಂದಿಗೆ ಭಾರತ ಪ್ರಪಂಚದಲ್ಲೆ ಅಗ್ರಗಣ್ಯವಾಗಲಿ ಎಂದು ಶ್ರೀನಾಗದೇವರಿಗೆ ಹಾಲೆರೆದು ನಾಗತಂಬಿಲ ನಡೆಸಲಾಗಿದೆ. ಶ್ರೀಪುರದೊಡೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯನಲ್ಲಿ ಆಡಳಿತ ಮಂಡಳಿ ಮತ್ತು ಊರ ಹಿರಿಯರೊಂದಿಗೆ ಸೇರಿ ಪ್ರಾರ್ಥನೆ ಕೂಡ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ